ಕರ್ನಾಟಕ

karnataka

ETV Bharat / state

ದಂತ ಚಿಕಿತ್ಸೆಗಾಗಿ ಹೊಸ ಲೇಸರ್ ಸಾಧನ‌ ಆವಿಷ್ಕರಿಸಿದ ಹುಬ್ಬಳ್ಳಿ ವೈದ್ಯ.. ದೇಶದಲ್ಲೇ ಮೊದಲು

ಡಾ. ಚಂದ್ರಶೇಖರ್ ಯಾವಗಲ್, ದಂತ ವೈದ್ಯರು ಅನುಭವಿಸುವ ಕಷ್ಟಗಳು, ತಾವು ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡ ನೋವು ಹಾಗೂ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ದಂತ ವೈದ್ಯಕೀಯ ‌ಕ್ಷೇತ್ರಕ್ಕೆ ಸಹಾಯವಾಗುವಂತಹ ಹೊಸ ಲೇಸರ್ ಉಕರಣಗಳನ್ನು ಸಿದ್ದಪಡಿಸಿ ತಮ್ಮ ಹೆಸರಿನಲ್ಲಿ ‌ಪೇಟೆಂಟ್ ಮಾಡಿಸಿದ್ದಾರೆ.

By

Published : Jan 9, 2021, 8:43 AM IST

Hubli doctor invented new laser device wich helps The dentist
ಹೊಸ ಲೇಸರ್ ಸಾಧನ‌ ಅವಿಷ್ಕರಿಸಿದ ಹುಬ್ಬಳ್ಳಿ ವೈದ್ಯ..ದಂತ ವೈದ್ಯಕೀಯ ‌ಕ್ಷೇತ್ರದಲ್ಲಿ ದೇಶದಲ್ಲೇ ಮೊದಲು

ಹುಬ್ಬಳ್ಳಿ: ದಂತ ವೈದ್ಯಕೀಯ ‌ಕ್ಷೇತ್ರದಲ್ಲಿ ದೇಶದಲ್ಲೇ ಯಾರೂ ಮಾಡದ ಸಾಧನೆಯನ್ನು ಹುಬ್ಬಳ್ಳಿಯ ವೈದ್ಯರೊಬ್ಬರು ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಹೌದು, ‌ನಗರದ ಖ್ಯಾತ ಲೇಸರ್ ದಂತ ವೈದ್ಯರಾದ ಡಾ. ‌ಚಂದ್ರಶೇಖರ್ ಯಾವಗಲ್, ದೇಶದಲ್ಲಿ ಯಾವ ವೈದ್ಯರು‌ ಮಾಡದ ಸಾಧನೆ ಮಾಡುವ ಮೂಲಕ ಅಮೇರಿಕಾದ ಫೋರ್ಬ್ಸ್ ಮ್ಯಾಗಜಿನ್​​​ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.

ದಂತ ವೈದ್ಯರ ಅನುಕೂಲಕ್ಕಾಗಿ ಲೇಸರ್ ಸಾಧನ‌ವನ್ನು ಅವಿಷ್ಕಾರ ಮಾಡಿದ್ದಾರೆ. ಈ‌ ಮೂಲಕ‌ ನೋವು ರಹಿತ ದಂತ ಚಿಕಿತ್ಸೆಗೆ ಮಹತ್ವದ ‌ಕೊಡುಗೆ ನೀಡಿದ್ದಾರೆ.

ಡಾ. ‌ಚಂದ್ರಶೇಖರ್ ಯಾವಗಲ್, ದಂತ ವೈದ್ಯ

ಸಾಧನೆ:

ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಡಾ. ಚಂದ್ರಶೇಖರ್ ಯಾವಗಲ್, ದಂತ ವೈದ್ಯರು ಅನುಭವಿಸುವ ಕಷ್ಟಗಳು ಹಾಗೂ ತಾವು ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡ ನೋವುಗಳು ಹಾಗೂ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಲೇಸರ್ ಉಕರಣಗಳನ್ನು ಸಿದ್ದಪಡಿಸಿ ತಮ್ಮ ಹೆಸರಿನಲ್ಲಿ ‌ಪೇಟೆಂಟ್ ಮಾಡಿಸಿದ್ದಾರೆ. ತಮ್ಮ ಲೇಸರ್ ಉದ್ಯಮ ನೋವಾಲಾಸ್ ಸಂಸ್ಥೆಯ ಮೂಲಕ ಆವಿಷ್ಕರಿಸಿದ ಸುಧಾರಿತ ಅತ್ಯಾಧುನಿಕ ಲೇಸರ್ ಉಪಕರಣಗಳು ದೇಶ ಹಾಗೂ ಅಂತರಾಷ್ಟ್ರೀಯ ‌ಮಟ್ಟದಲ್ಲಿ ದಂತವೈದ್ಯ ವೃತ್ತಿಯಲ್ಲಿ ಅತ್ಯುತ್ತಮ ಪರಿವರ್ತನೆಗೆ ಕಾರಣವಾಗಿವೆ.

ಮುಂದಿನ ಯೋಜನೆ:

ಲೇಸರ್ ವೇದಾ ಬ್ಯಾನರ್ ಅಡಿಯಲ್ಲಿ ಪ್ರಾರಂಭಿಸಿರುವ ಸರಣಿ ಸೂಪರ್ ಸ್ಪೆಷಾಲಿಟಿ ದಂತ ಚಿಕಿತ್ಸಾಲಯಗಳು ಅತ್ಯಾಧುನಿಕವಾದ ತಂತ್ರಜ್ಞಾನ ‌ಮೂಲಸೌಕರ್ಯ ಒಳಗೊಂಡು ಉನ್ನತ ಸ್ಥಾನದಲ್ಲಿವೆ. ಬರುವ ದಿನಗಳಲ್ಲಿ ಫಾರ್ಮಾಸೂಟಿಕಲ್ ನಿಂದ ಹಿಡಿದು ಆಧುನಿಕ ಫೋಟೋಸೂಟಿಕಲ್ ಆರೋಗ್ಯ ಸೇವೆ ಪ್ರಾರಂಭಿಸಲು ನೋವಾಲೇಸ್ ಸಂಸ್ಥೆ ಸಜ್ಜಾಗಿದೆ. ಇವರ ಈ ಸಾಧನೆಯನ್ನು ಫೊರ್ಬ್ಸ್ ಮ್ಯಾಗಜಿನ್ ‌ಕೊಂಡಾಡಿದೆ.

ಯಾವಗಲ್​ ಸಾಧನೆ ಕೊಂಡಾಡಿದ ಫೋರ್ಬ್ಸ್ ಮ್ಯಾಗಜೀನ್​​​

ಹಿನ್ನೆಲೆ:

ಡಾ.‌ ಚಂದ್ರಶೇಖರ್ ಅವರು ಹುಬ್ಬಳ್ಳಿಯ ‌ಮಧ್ಯಮ ವರ್ಗದ ದಂಪತಿ ಮುರುಗೇಶ್ ಮತ್ತು ಲತಾ ಯಾವಗಲ್ ಅವರ ಪುತ್ರ. ಹುಬ್ಬಳ್ಳಿ ಬಿಡಿಎಸ್​ನಲ್ಲಿ ಶಿಕ್ಷಣ ಪೂರೈಸಿ ಅಗ್ರಸ್ಥಾನ ಪಡೆದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಮಕ್ಕಳ ದಂತ ವೈದ್ಯಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ವಿದೇಶದಲ್ಲಿ ಲೇಸರ್ ಕುರಿತಂತೆ ಉನ್ನತ ವ್ಯಾಸಂಗ ಪೂರೈಸಿದ್ದಾರೆ.

ವೃತ್ತಿ ಜೀವನ:

2006ರಲ್ಲಿ ಲೇಸರ್ ತಜ್ಞರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಡಾ. ಯಾವಗಲ್ 350 ರೂಪಾಯಿಗೆ ಲೇಸರ್ ‌ಕಿಟ್ ಅನ್ನು ಬಾಡಿಗೆ ಪಡೆದು ವೈದ್ಯಕೀಯ ಸೇವೆ ಸಲ್ಲಿಸಿದ್ದನ್ನು ಈ ಸಂದರ್ಭ ಮೆಲಕು ಹಾಕಿದ್ದಾರೆ.

ಉದ್ದೇಶ:

ಲೇಸರ್ ತಂತ್ರಜ್ಞಾನವು ಹೆಚ್ಚು ಕೈಗೆಟುಕುವಂತಾಗಬೇಕು. ಸಾಮಾನ್ಯ ಭಾರತೀಯ ವೈದ್ಯರು ಅದನ್ನು ಬಳಸಬೇಕು. ಆಗ ಮಾತ್ರ ಬಡ ಭಾರತೀಯ ರೋಗಿಗಳು ಈ ನಂಬಲಾಗದ ವಿಜ್ಞಾನದ ಲಾಭವನ್ನು ಪಡೆಯಬಹುದು ಎಂಬ ಉದ್ದೇಶದಿಂದ ಆತ್ಮನಿರ್ಭರ್, ‘ಮೇಡ್ ಇನ್ ಇಂಡಿಯಾ’ ಕಲ್ಪನೆ ಸಾಕಾರಗೊಳಿಸಲು ನೊವೊಲೇಸ್ ಅಲ್ಟ್ರಾ-ಆಧುನಿಕ ಕ್ಲಿನಿಕಲ್ ಲೇಸರ್ ಸಾಧನಗಳು ಮತ್ತು ಪರಿಕರಗಳನ್ನು ಪೋರ್ಟಬಲ್, ದಕ್ಷತಾಶಾಸ್ತ್ರ ಮತ್ತು ಅತ್ಯುತ್ತಮ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ಉತ್ಪಾದಿಸುತ್ತಿದ್ದಾರೆ.‌

ಈ ಸುದ್ದಿಯನ್ನೂ ಓದಿ:ಲಾಜಿಸ್ಟಿಕ್‌ ಉದ್ಯಮದಲ್ಲಿ ಕೌಶಲ್ಯತೆ ಬೆಳೆಸಲು ಉತ್ಕೃಷ್ಟತೆ ಕೇಂದ್ರ ಸ್ಥಾಪನೆ: ಫ್ಲಿಪ್​ಕಾರ್ಟ್

ಇವರ ಈ‌ ಕಾರ್ಯ ಮುಂದುವರೆದು ದೇಶದ ವೈದ್ಯಕೀಯ ‌ಕ್ಷೇತ್ರಕ್ಕೆ ಇನ್ನು ಉತ್ತಮ ಸೇವೆ‌ ನೀಡಲಿ‌ ಎಂಬುದು ನಮ್ಮೆಲ್ಲರ ಆಶಯ.

ABOUT THE AUTHOR

...view details