ಹುಬ್ಬಳ್ಳಿ :ಮಹಾನಗರ ಪಾಲಿಕೆಯ ಸಿಬ್ಬಂದಿ ಬೀದಿ ಬದಿಯ ಹಣ್ಣಿನ ವ್ಯಾಪಾರ ಮಾಡುವವರ ಜೊತೆ ಅನುಚಿತ ವರ್ತನೆ ಮಾಡಿದ್ದಲ್ಲದೆ ಹಣ್ಣುಗಳನ್ನು ಕಸದ ತುಂಬ ವಾಹನಕ್ಕೆ ಹಾಕಿ ಅಮಾನವೀಯವಾಗಿ ನಡೆದುಕೊಂಡ ಆರೋಪ ಕೇಳಿ ಬಂದಿದೆ.
ಬೀದಿ ಬದಿ ವ್ಯಾಪಾರಿಗಳ ಮೇಲೆ ಪಾಲಿಕೆ ಸಿಬ್ಬಂದಿ ದೌರ್ಜನ್ಯ.. - palike atrocities on street
ಇಷ್ಟು ದಿನ ಲಾಕ್ಡೌನ್ನಿಂದ ಕಂಗೆಟ್ಟಿದ್ದ ವ್ಯಾಪಾರಿಗಳ ಮೇಲೆ ಪಾಲಿಕೆ ಸಿಬ್ಬಂದಿ ದಬ್ಬಾಳಿಕೆ ನಡೆಸಿದ್ದಾರೆ. ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ದಂಡ ಹಾಕಬಹುದಿತ್ತು. ಇಲ್ಲವೇ ಸ್ಥಳಾಂತರ ಮಾಡಿಸಬಹುದಿತ್ತು..
ನಗರದ ಗುಜರಾತ್ ಭವನ ಬಳಿಯ ಫುಟ್ಪಾತ್ ಮೇಲೆ ಹಲವರು ತರಕಾರಿ ಹಾಗೂ ಹಣ್ಣುಗಳ ವ್ಯಾಪಾರ ಮಾಡುತ್ತಾರೆ. ಇಂದು ಏಕಾಏಕಿ ಕಸದ ವಾಹನದೊಂದಿಗೆ ಇಲ್ಲಿಗೆ ಬಂದ ಪೌರ ಕಾರ್ಮಿಕ ಸಿಬ್ಬಂದಿ ಹಣ್ಣುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಸದ ಲಾರಿಯಲ್ಲಿ ಹಾಕಿಕೊಂಡು ಹೋಗಿದ್ದಲ್ಲದೇ ವ್ಯಾಪಾರಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಇಷ್ಟು ದಿನ ಲಾಕ್ಡೌನ್ನಿಂದ ಕಂಗೆಟ್ಟಿದ್ದ ವ್ಯಾಪಾರಿಗಳ ಮೇಲೆ ಪಾಲಿಕೆ ಸಿಬ್ಬಂದಿ ದಬ್ಬಾಳಿಕೆ ನಡೆಸಿದ್ದಾರೆ. ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ದಂಡ ಹಾಕಬಹುದಿತ್ತು. ಇಲ್ಲವೇ ಸ್ಥಳಾಂತರ ಮಾಡಿಸಬಹುದಿತ್ತು. ಆದರೆ, ಹಣ್ಣುಗಳನ್ನು ಕಸದ ಲಾರಿಯಲ್ಲಿ ಹಾಕಿ ಗೂಂಡಾವರ್ತನೆ ತೋರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.