ಕರ್ನಾಟಕ

karnataka

ಇಸ್ಪೀಟ್​ ದಂಧೆ: ಹು-ಧಾ ಕಮಿಷನರೇಟ್​ ವ್ಯಾಪ್ತಿಯಲ್ಲೇ 116 ಪ್ರಕರಣ ದಾಖಲು!

By

Published : Jun 22, 2021, 7:18 PM IST

Updated : Jun 22, 2021, 9:15 PM IST

ಹುಬ್ಬಳ್ಳಿ - ಧಾರವಾಡ ನಗರಗಳಲ್ಲಿ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ದಂಧೆ ಎಗ್ಗಿಲ್ಲದೇ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಹು-ಧಾ ಪೊಲೀಸ್ ಕಮಿಷನರೇಟ್​ ವ್ಯಾಪ್ತಿಯಲ್ಲೇ 116 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಈ ಸಂಬಂಧ ನೂರಾರು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇಸ್ಪೀಟು ದಂಧೆ
ಇಸ್ಪೀಟು ದಂಧೆ

ಹುಬ್ಬಳ್ಳಿ:ಕೊರೊನಾ ಲಾಕ್​ಡೌನ್​ನಿಂದ ಜನ ಜೀವನ ಅಸ್ತವಸ್ತ್ಯವಾಗಿ ಊಟಕ್ಕೂ ಪರದಾಡುತ್ತಿದ್ದಾರೆ. ಈ ನಡುವೆ ವಾಣಿಜ್ಯ ನಗರಿ, ಚೋಟಾ ಮುಂಬೈ ಎನಿಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಮಾತ್ರ ಸದ್ದಿಲ್ಲದೇ ಇಸ್ಪೀಟು, ಮಟ್ಕಾ ದಂಧೆ ಶುರುವಾಗಿದೆ. ಲಾಕ್​ಡೌನ್ ಬಂಡವಾಳವಾಗಿಸಿಕೊಂಡಿರುವ ದಂಧೆಕೋರರು ಇದೀಗ ನಗರದಲ್ಲಿ ಕದ್ದುಮುಚ್ಚಿ ತಮ್ಮ ಆಟ ಶುರು ಮಾಡಿಕೊಂಡಿದ್ದಾರೆ.

ಹುಬ್ಬಳ್ಳಿ - ಧಾರವಾಡ ನಗರಗಳಲ್ಲಿ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ದಂಧೆ ಎಗ್ಗಿಲ್ಲದೇ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಹು - ಧಾ ಪೊಲೀಸ್ ಕಮಿಷನರೇಟ್​ ವ್ಯಾಪ್ತಿಯಲ್ಲೇ 116 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಈ ಸಂಬಂಧ ನೂರಾರು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಲಾಭುರಾಮ್
ಹು-ಧಾ ಕಮಿಷನರೇಟ್​ ವ್ಯಪ್ತಿಯಲ್ಲೇ 116 ಪ್ರಕರಣಗಳು ದಾಖಲು
ಹು-ಧಾ ಕಮಿಷನರೇಟ್​ ವ್ಯಪ್ತಿಯಲ್ಲೇ 116 ಪ್ರಕರಣಗಳು ದಾಖಲು

ಹು - ಧಾ ನಗರ ಅಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲೂ ಸಹ ಬೆಟ್ಟಿಂಗ್, ಜೂಜಾಟ ದಂಧೆ ನಡೆಯುತ್ತಿದೆ. ಸದ್ಯ ಅಂತಹವರನ್ನ ಬಂಧಿಸುವಲ್ಲಿ ಪೊಲೀಸರು ನಿತ್ಯ ಶ್ರಮಿಸುತ್ತಿದ್ದರೂ ದಂಧೆಕೋರರು ಮಾತ್ರ ತಮ್ಮ ಕಾಯಕ ಮುಂದುವರೆಸಿದ್ದಾರೆ. ಕೊರೊನಾ ನಡುವೆಯೇ ಇಷ್ಟೊಂದು ಪ್ರಕರಣಗಳು ಬೆಳಕಿಗೆ ಬಂದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.

Last Updated : Jun 22, 2021, 9:15 PM IST

ABOUT THE AUTHOR

...view details