ಕರ್ನಾಟಕ

karnataka

ETV Bharat / state

ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರ.. ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಗೃಹ ಸಚಿವರು - Border dispute issue

ಕರಿ ನೀರು ಶಿಕ್ಷೆಗೆ ಒಳಗಾಗಿ ಅಂಡಮಾನ್ ಜೈಲಿನಲ್ಲಿ ಇದ್ದ ವೀರ ಸಾವರ್ಕರ್ ಗೆ ಇವರು ಹಿಯಾಳಿಸುತ್ತಾರೆ. ಅವರ ಬಗ್ಗೆ ಲಘುವಾಗಿ ಮಾತನಾಡುವ ಇವರು ಮನುಷ್ಯರಾ, ಈ ದೇಶದ ನಾಗರೀಕರಾ?. ಈ ರೀತಿ ತುಷ್ಟೀಕರಣ‌ ಮಾಡಿದ್ದರಿಂದಲೇ ಜನ ಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.

Home Minister Araga Gyanendra
ಗೃಹ ಸಚಿವ ಆರಗ‌ ಜ್ಞಾನೇಂದ್ರ

By

Published : Dec 19, 2022, 6:38 PM IST

ಗೃಹ ಸಚಿವ ಆರಗ‌ ಜ್ಞಾನೇಂದ್ರ ಪ್ರತಿಕ್ರಿಯೆ

ಧಾರವಾಡ:ಸುವರ್ಣ ಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಗೃಹ ಸಚಿವ ಆರಗ‌ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್​ನವರ ಹಣೆಬರಹ ಇದು, ಒಂದು ಜನಾಂಗವನ್ನು ತೃಪ್ತಿ ಪಡಿಸಿದರೆ ತಾವು ಶಾಶ್ವತವಾಗಿ ಅಧಿಕಾರದಲ್ಲಿ ಇರಬಹುದು ಎಂದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇವಲ ಅಧಿಕಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಕರಿ ನೀರು ಶಿಕ್ಷೆಗೆ ಒಳಗಾಗಿ ಅಂಡಮಾನ್ ಜೈಲಿನಲ್ಲಿದ್ದ ವೀರ ಸಾವರ್ಕರ್ ಗೆ ಇವರು ಹಿಯಾಳಿಸುತ್ತಾರೆ. ಅವರ ಬಗ್ಗೆ ಲಘುವಾಗಿ ಮಾತನಾಡುವ ಇವರು ಮನುಷ್ಯರಾ, ಈ ದೇಶದ ನಾಗರೀಕರಾ?. ಈ ರೀತಿ ತುಷ್ಟೀಕರಣ‌ ಮಾಡಿದ್ದರಿಂದ ಜನ ಪಾಠ ಕಲಿಸಿದ್ದಾರೆ ಎಂದರು.

ಮುಂದುವರೆದು, ಇವರ ಜಾಯಮಾನವೇ ಇದು. ಸಾರ್ವಕರ್​ಗಿಂತ ದೊಡ್ಡ ಮಹಾನುಭಾವರು ನಮ್ಮ ದೇಶದಲ್ಲಿ ಇದ್ದಾರೆ, ಇದರ ಬಗ್ಗೆ ನಾನು ಇಲ್ಲ ಎನ್ನಲ್ಲ, ಆದರೆ ಸಾವರ್ಕರ್ ಯಾಕೆ ನಮಗೆ ಮಹಾನುಭಾವ ಅಲ್ಲಾ ಅದು ಹೇಳಲಿ ಅವರು. ಇಷ್ಟು ದಿನ ಇಲ್ಲದ ಫೋಟೊ ಈಗಲೂ ಹಾಕುತ್ತೇವೆ, ಮುಂದೆಯೂ ಹಾಕುತ್ತೇವೆ, ಅದರಲ್ಲಿ ತಪ್ಪೇನಿದೆ ಎಂದು ಕಿಡಿಕಾರಿದರು.

ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರ ಹಾಕಬಹುದಿತ್ತಲ್ಲ. ಸಾವರ್ಕರ್​ ಅವರ ಫೋಟೋ ಯಾಕೆ ಎನ್ನುವ ಕಾಂಗ್ರೆಸ್​ನ ಆರೋಪವನ್ನು ಗೃಹ ಸಚಿವರಿಗೆ ಮಾಧ್ಯಮದವರು ಪ್ರಶ್ನಿಸಿದಾಗ ಅವರೆಲ್ಲರ ಸ್ಮಾರಕ ಮಾಡಿದ್ದೇವೆ. ಹಾಗಾದರೆ ವೀರ ಸಾವರ್ಕರ್ ಅವರು​ ಹೋರಾಟಗಾರರಲ್ಲವಾ ಎಂದು ಪ್ರಶ್ನಿಸಿದರು.

ಹಾಗೆ ಗಡಿ ವಿವಾದ ವಿಚಾರದ ಕುರಿತು ಮಾತನಾಡಿದ ಅವರು, ಯಾರು ಕಾನೂನು ಕೈಗೆ ತೆಗೆದುಕೊಂಡಿದ್ದಾರೋ ಅವರನ್ನು ಪೊಲೀಸರು ಶಿಕ್ಷಿಸದೆ ಬಿಡುವುದಿಲ್ಲ. ಈ ಸಂಬಂಧ ವಾದ ಕೋರ್ಟ್​ನಲ್ಲಿದೆ. ವಾದ ಮಾಡಲಿ ಎಂದು ಮುಂದಕ್ಕೆ ಸಾಗಿದರು.

ಇದನ್ನೂ ಓದಿ;ಚುನಾವಣೆ ಬಳಿಕ ಬಿಜೆಪಿ ನಮ್ಮ ಪಕ್ಷದ ಬಾಗಿಲಿಗೇ ಬರಬೇಕು: ಹೆಚ್​ಡಿಕೆಯಿಂದ ಸಮ್ಮಿಶ್ರ ಸರ್ಕಾರ ರಚನೆ ಸುಳಿವು?

ABOUT THE AUTHOR

...view details