ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಕುಖ್ಯಾತ ನಾಲ್ವರು ಬೈಕ್ ಕಳ್ಳರ ಬಂಧನ; 11 ಬೈಕ್​​ಗಳು ವಶ - Hubballi crime news

ಹುಬ್ಬಳ್ಳಿಯ ವಿವಿಧೆಡೆ ಪಾರ್ಕ್​ ಮಾಡಲಾಗುತ್ತಿದ್ದ ಬೈಕ್​ಗಳನ್ನು ಎಗರಿಸಿಕೊಂಡು ಹೋಗುತ್ತಿದ್ದ ಕುಖ್ಯಾತ ನಾಲ್ವರು ಬೈಕ್​ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 7,80,000 ಮೌಲ್ಯದ 11 ಬೈಕ್​​ಗಳನ್ನು ವಶಪಡಿಸಿಕೊಂಡಿದ್ದಾರೆ.

Four notorious bike thieves arrested in Hubballi
ಬಂಧಿತ ಖದೀಮರಿಂದ 11 ಬೈಕ್​​ಗಳ ವಶ

By

Published : Oct 31, 2020, 9:14 PM IST

ಹುಬ್ಬಳ್ಳಿ : ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ಬೈಕ್​​ಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಚಾಲಾಕಿ ಕಳ್ಳರನ್ನು ಬಂಧಿಸಿ 11 ಬೈಕ್​​ಗಳನ್ನು ವಶಪಡಿಸಿಕೊಳ್ಳುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ದೇಶಪಾಂಡೆ ನಗರದ ನಿವಾಸಿ ಹನಂತ ಸಂಜು ಮಣ್ಣವಡ್ಡರ, ರಾಯನಾಳ ಗ್ರಾಮದ ನಿವಾಸಿ ಚಂದ್ರಶೇಖರ ಗುದ್ದಿ, ಸೆಟ್ಲಮೆಂಟ್ ನಿವಾಸಿ ವಿನಾಯಕ ಮೈಸೂರು, ಉಮಚಗಿ ಗ್ರಾಮದ ನಿವಾಸಿ ವೀರೇಶ ಅಂಗಡಿ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.

ಬಂಧಿತ ಖದೀಮರಿಂದ 11 ಬೈಕ್​​ಗಳ ವಶಪಡಿಸಿಕೊಂಡ ಪೊಲೀಸರು

ಬಂಧಿತರಿಂದ ಸುಮಾರು 7,80,000 ಮೌಲ್ಯದ 11 ಬೈಕ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಆಯುಕ್ತ ಲಾಬೂ ರಾಮ್, ಡಿಸಿಪಿ ಪಿ. ಕೃಷ್ಣಕಾಂತ ಮಾರ್ಗದರ್ಶನದ ಮೇರೆಗೆ ಹುಬ್ಬಳ್ಳಿ ಉಪನಗರ ಠಾಣೆಯ ಇನ್ಸ್​ಪೆಕ್ಟರ್​ ಎಸ್ ಕೆ ಹೊಳೆನ್ನವರ ನೇತೃತ್ವದಲ್ಲಿ ಬಂಧಿಸಿದ್ದಾರೆ.

ABOUT THE AUTHOR

...view details