ಧಾರವಾಡ :ಕಾರಿನ ಚಕ್ರ ಸ್ಫೋಟಗೊಂಡ ಕಾರಣ ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ 5 ಮಂದಿ ಮೃತಪಟ್ಟ ಘಟನೆ ಸಂಭವಿಸಿದೆ.
ಕಾರಿನ ಟಯರ್ ಸ್ಫೋಟ: ಒಂದೇ ಕುಟುಂಬದ ಐವರು ಸಾವು - kannada news
ಕಾರಿನ ಟಯರ್ ಬ್ಲಾಸ್ಟ್ ಆದ ಪರಿಣಾಮ ಮಕ್ಕಳು ಸೇರಿದಂತೆ ಒಂದೇ ಕುಟುಂಬ ಐದು ಜನರ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕಾರಿನ ಟೈರ್ ಬ್ಲಾಸ್ಟ್ ಒಂದೆ ಕುಟುಂಬ 5 ಜನ ಸಾವು
ದಾವಣಗೆರೆಯಿಂದ ಬಾಗಲಕೋಟೆಗೆ ಮರುಳುತ್ತಿರುವಾಗ ನವಲಗುಂದ-ನರಗುಂದ ರಸ್ತೆಯ ಮಧ್ಯೆ ಕಾರಿನ ಟಯರ್ ಸ್ಫೋಟಗೊಂಡಿದೆ. ಬಳಿಕ ನಿಯಂತ್ರಣ ತಪ್ಪಿದ ಕಾರು, ಲಾರಿಗೆ ಗುದ್ದಿದೆ ಎನ್ನಲಾಗಿದೆ. ಪರಿಣಾಮ ಒಂದೇ ಕುಟುಂಬ 3 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರನ್ನು ಬಾಗಲಕೋಟೆಯ ಕವಲಪೇಟ ನಿವಾಸಿಗಳಾದ ರವಿ ಹಂಡಿ(40), ಲೇಖಾಶ್ರಿ ಹಂಡಿ(18), ನವೀನಕುಮಾರ ಹಂಡಿ(14), ಶರಣ (7), ವರ್ಣ ಜಿಗಜಿಣಿ (12) ಎಂದು ಗುರುತಿಸಲಾಗಿದೆ.