ಕರ್ನಾಟಕ

karnataka

ETV Bharat / state

ಕೃಷಿ ವಿವಿ ಖಾಲಿ ಹುದ್ದೆಗಳಿಗೆ ಪರೀಕ್ಷೆ: ಎಕ್ಸಾಂ ಧಿಡೀರ್​​​​​​ ರದ್ದು, ಅಭ್ಯರ್ಥಿಗಳ ಪರದಾಟ - ಧಿಡೀರ್​​​​​​​ ಪರೀಕ್ಷೆ ರದ್ದು, ಅಭ್ಯರ್ಥಿಗಳ ಪರದಾಟ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇದ್ದ 36 ಹುದ್ದೆಗಳಿಗೆ ನಡೆಯಬೇಕಿದ್ದ ಪರೀಕ್ಷೆ ಇಂದು ದಿಢೀರ್​ ರದ್ದಾಗಿದೆ. ಹೀಗಾಗಿ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗಳು ಪರದಾಡುವಂತಾಗಿದೆ.

darwad agricultire university
ಕೃವಿವಿ ಖಾಲಿ ಹುದ್ದೆ ಪರೀಕ್ಷೆ ರದ್ದು

By

Published : Feb 9, 2020, 1:43 PM IST

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇದ್ದ 36 ಹುದ್ದೆಗಳಿಗೆ ಇಂದು ಪರೀಕ್ಷೆ ಇತ್ತು. ಆದ್ರೆ ಧಿಡೀರನೆ ಪರೀಕ್ಷೆ ರದ್ದಾಗಿದ್ದರಿಂದ ಅಭ್ಯರ್ಥಿಗಳಿಗೆ ಪರದಾಡುವ ಸ್ಥಿತಿ ನಿರ್ಮಾ.

ಧಾರವಾಡ ಕೃಷಿ ವಿವಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಗೆ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 6000 ಸಾವಿರ ಅಭ್ಯರ್ಥಿಗಳು ಬಂದಿದ್ದರು. ಕಂಪ್ಯೂಟರ್ ಅಸಿಸ್ಟೆಂಟ್ ಕಮ್ ಕಂಪ್ಯೂಟರ್ ಆಪರೇಟರ್​​​ ಹುದ್ದೆಗಳಿಗೆ ಪರೀಕ್ಷೆ ನಡೆಯಬೇಕಿತ್ತು.

ಕೃವಿವಿ ಖಾಲಿ ಹುದ್ದೆಗಳ ಭರ್ತಿಗೆ ನಡೆಯಬೇಕಿದ್ದ ಪರೀಕ್ಷೆ ದಿಢೀರ್​ ರದ್ದು ಅಭ್ಯರ್ಥಿಗಳು ಕಂಗಾಲು

ಎರಡನೇ ಬಾರಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರು. ಹಾಗಾಗಿ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪವನ್ನು ಸಹ ಅಭ್ಯರ್ಥಿಗಳು‌ ಮಾಡುತ್ತಿದ್ದಾರೆ. 2017ರಲ್ಲಿ ಮೊದಲ ಪರೀಕ್ಷೆ ನಡೆಸಿ ಕೀ ಉತ್ತರ ಬಿಡುಗಡೆಗೊಳಿಸಿದ್ದರು. ಮತ್ತೆ ಈಗ 2ನೇ ಬಾರಿ ಪರೀಕ್ಷೆ ಕರೆದು ಏಕಾಏಕಿ ರದ್ದುಪಡಿಸಿದ್ದರಿಂದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ರು.

ABOUT THE AUTHOR

...view details