ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಬಳಿ KSRTC ಬಸ್ ಪಲ್ಟಿ: ಬಸ್​ನಡಿ ಸಿಲುಕಿದ ಪ್ರಯಾಣಿಕರು... ರಕ್ಷಿಸುವಂತೆ ಗೋಗರೆದರೂ ನಿಸ್ಸಹಾಯಕರಾದ ಜನ

ಕೆಎಸ್​​ಆರ್​ಟಿಸಿ ಬಸ್ ಟೈಯರ್ ಸ್ಫೋಟ. ಬಸ್ ಪಲ್ಟಿಯಾದ ಪರಿಣಾಮ ಚಾಲಕ ಮೃತ. 25 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ.

ಬಸ್ ಪಲ್ಟಿ
ಬಸ್ ಪಲ್ಟಿ

By

Published : Oct 10, 2022, 9:53 AM IST

Updated : Oct 10, 2022, 1:15 PM IST

ಹುಬ್ಬಳ್ಳಿ:ಟೈರ್ ಸ್ಫೋಟಗೊಂಡು ಕೆಎಸ್​​ಆರ್​ಟಿಸಿ ಬಸ್ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಶೆರೆವಾಡ ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಬಸ್ ಪಲ್ಪಿಯಾದ್ದರಿಂದ ಬಸ್​​ನಡಿ ಪ್ರಯಾಣಿಕರು ಸಿಲುಕಿ, ರಕ್ಷಿಸುವಂತೆ ಗೋಗರೆದಿರುವುದು ಮನಕಲಕುವಂತಿದೆ. ಆದ್ರೆ ಸ್ಥಳೀಯರು ನಿಸ್ಸಹಾಯಕರಾಗಿ ನಿಂತು ಸಮಾಧಾನ ಮಾಡಿದ್ದಾರೆ.

KA 25 F 3097 ಸಂಖ್ಯೆಯ ಬಸ್ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾಗ ಶೆರೆವಾಡ ಗ್ರಾಮದ ಬಳಿ ಏಕಾಏಕಿ ಟೈಯರ್ ಬ್ಲಾಸ್ಟ್ ಆಗಿ ಬಸ್ ಪಲ್ಟಿಯಾಗಿದೆ‌. ಬಸ್ ಪಲ್ಟಿಯಾಗುತ್ತಿದಂತೆ ಚಾಲಕ ಬಸ್​ನಡಿ ಸಿಲುಕಿದ್ದಾರೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ರವೀಂದ್ರ ಬಿಂಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆದ್ರೆ ಬಸ್​​ನಲ್ಲಿ ಸಿಲುಕಿದ ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮನ್ನ ಬೇಗ ಎಬ್ಬಿಸಿ ಎಂದು ಬಸ್​ನ ಸೀಟು, ಕಿಟಕಿಗಳಡಿ ಸಿಲುಕಿದ್ದ ಪ್ರಯಾಣಿಕರು ಗೋಗರೆಯುತ್ತಿದ್ದರು. ಜೆಸಿಬಿ ಬರುತ್ತೆ ಎಂದು ಸ್ಥಳೀಯರು ಸಮಾಧಾನ ಮಾಡುತ್ತಿರುವುದು ಕಂಡುಬಂತು.

ಹುಬ್ಬಳ್ಳಿ ಬಳಿ KSRTC ಬಸ್ ಪಲ್ಟಿ

25 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಓದಿ: ರಾಯಚೂರಲ್ಲಿ ಅಪಘಾತ: ಸಂಚಾರಕ್ಕೆ ಅಡ್ಡ ಬಂದ ನಾಯಿ ಉಳಿಸಿ, ಜೀವ ಕಳೆದುಕೊಂಡ ವ್ಯಕ್ತಿ)

Last Updated : Oct 10, 2022, 1:15 PM IST

ABOUT THE AUTHOR

...view details