ಕರ್ನಾಟಕ

karnataka

ವರದಕ್ಷಿಣೆ ಕಿರುಕುಳ: ಹೆಂಡತಿಗೆ ಬೆಂಕಿ ಹಚ್ಚಿದ ಗಂಡನ ಮನೆಯವರು..?

By

Published : Apr 17, 2020, 6:28 PM IST

ವರದಕ್ಷಿಣೆ ಕಿರುಕುಳದಿಂದ ಹೆಂಡತಿಗೆ ಗಂಡನ ಮನೆಯವರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಮಹಿಳೆ ಸಂಬಂಧಿಗಳು ಒತ್ತಾಯಿಸುತ್ತಿದ್ದಾರೆ.

Dowry harassment in Hubli
ವರದಕ್ಷಿಣೆ ಕಿರುಕುಳ

ಹುಬ್ಬಳ್ಳಿ: ಹೆಂಡತಿಗೆ ಗಂಡನ ಮನೆಯವರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಮಾರುತಿ ನಗರದ ಹೆಗ್ಗೇರಿ ಕಾಲೋನಿಯ ನಿವಾಸಿ ಕರಿಯಮ್ಮ ಎಂಬುವವರಿಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಹೆಂಡತಿಗೆ ಬೆಂಕಿ ಹಚ್ಚಿದ ಗಂಡನ ಮನೆಯವರು..?

ಕರಿಯಮ್ಮನ ಗಂಡನ ಮನೆಯವರು ನಿನ್ನೆ ರಾತ್ರಿ 9.30 ರ ಸುಮಾರಿಗೆ ಈ ಕೃತ್ಯವೆಸಗಿದ್ದಾರೆ ಎಂದು ಕರಿಯಮ್ಮನ ತಾಯಿ ಆರೋಪ ಮಾಡಿದ್ದಾರೆ. ವರದಕ್ಷಿಣೆ ತರುವಂತೆ ಕೂಡಾ ಸಾಕಷ್ಟು ಬಾರಿ ಕಿರುಕುಳವನ್ನು ಕೊಡುತ್ತಿದ್ದರು ಎಂದು ಸಂಬಂಧಿಗಳು ಆರೋಪಿಸುತ್ತಿದ್ದಾರೆ. ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಮಹಿಳೆ ಸಂಬಂಧಿಗಳು ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details