ETV Bharat / state

'ವಾರ್ನಿಂಗ್ ನಾನ್ ಕೇಳ್ತಿನೇನ್ರೀ': ಡಿಕೆಶಿ ಎಚ್ಚರಿಕೆಗೆ ಕೆ.ಎನ್​. ರಾಜಣ್ಣ ಡೋಂಟ್​ಕೇರ್​! - K N RAJANNA ON DCM WARNING - K N RAJANNA ON DCM WARNING

ರಾಜ್ಯ ಕಾಂಗ್ರೆಸ್​ನಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಸಂಬಂಧ ಮಾತಿನ ಚಕಮಕಿ ನಡೆಯುತ್ತಿದೆ. ಸಿಎಂ - ಡಿಸಿಎಂ ಬಗ್ಗೆ ಬಹಿರಂಗ ಚರ್ಚೆ ಬೇಡ, ಬಾಯಿಗೆ ಬೀಗ ಹಾಕಿ ಎಂದು ಡಿಕೆಶಿ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಸಚಿವ ರಾಜಣ್ಣ ಪ್ರತಿಕ್ರಿಯಿಸಿ, ವಾರ್ನಿಂಗ್ ನಾನ್ ಕೇಳ್ತೀನೇನ್ರೀ, ಹೇಳೋರಿಗೆ ಹೇಳುವುದು ಬಿಟ್ಟು ನಮಗೆ ಹೇಳಿದರೆ ನಾನು ಕೇಳುವವನೇ ಅಲ್ಲ ಎಂದು ಟಾಂಗ್​ ಕೊಟ್ಟಿದ್ದಾರೆ.

ಕೆ.ಎನ್​. ರಾಜಣ್ಣ
ಕೆ.ಎನ್​. ರಾಜಣ್ಣ (ETV Bharat)
author img

By ETV Bharat Karnataka Team

Published : Jun 29, 2024, 7:36 PM IST

Updated : Jun 29, 2024, 8:10 PM IST

ಸಚಿವ ಕೆ. ಎನ್. ರಾಜಣ್ಣ (ETV Bharat)

ಬೆಂಗಳೂರು: ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನ ಕೇಳಿದರೆ ಏನು ತಪ್ಪಾಗುತ್ತದೆ?. ಕೇಳಬಾರದ ನಾವು. ಕೇಳಿದ್ದು ತಪ್ಪಾಗುತ್ತದೆ ಎಂದರೆ ನಾನು ಎಂತಹದ್ದೇ ಕ್ರಮ ಎದುರಿಸಲು ಸಿದ್ಧ ಇದ್ದೀನಿ ಎಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ಹೇಳಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ವಿಚಾರವಾಗಿ ಯಾರೂ ಮಾತನಾಡಬಾರದು ಎಂಬ ಡಿಕೆಶಿ ವಾರ್ನಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ವಾರ್ನಿಂಗ್ ನಾನ್ ಕೇಳ್ತಿನೇನ್ರೀ, ರಾಜಣ್ಣ ರಾಜಣ್ಣಾನೇ. ಬಾಯಿಗೆ ಬೀಗ ಎಲ್ಲಾರು ಹಾಕಿಕೊಳ್ಳಬೇಕು. ಎಲ್ಲರೂ ಹಾಕಿಕೊಂಡರೆ ನಾವು ಹಾಕಿಕೊಳ್ಳುತ್ತೇವೆ. ಹೇಳೋರಿಗೆ ಹೇಳುವುದು ಬಿಟ್ಟು ನಮಗೆ ಹೇಳಿದರೆ ನಾನು ಕೇಳುವವನೇ ಅಲ್ಲ ಎಂದು ತಿರುಗೇಟು ಕೊಟ್ಟರು.

ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ಯಾರೋ ಒಬ್ಬರು ಹೇಳಿದರೆ ಕೇಳಿಕೊಂಡು ಸುಮ್ಮನೆ ಇರೋಕೆ ಆಗುತ್ತಾ?. ಏನು ಅವರು ಸಿಎಂ ಮಾಡಿದ್ದಾರಾ?. ಕಾಂಗ್ರೆಸ್​ ಹೈಕಮಾಂಡ್​ ಮತ್ತು ಶಾಸಕರ ಅಭಿಪ್ರಾಯದಂತೆ ಸಿಎಂ, ಡಿಸಿಎಂ ಆಗಿದ್ದಾರೆ. ಶಾಮನೂರು ಶಿವಶಂಕರಪ್ಪ ಮಾಡಿ ಅಂತಾ ಅವರ ಸ್ವಾಮಿಗಳು ಕೇಳುತ್ತಾರೆ. ಸತೀಶ್ ಜಾರಕಿಹೊಳಿ ಸಿಎಂ ಮಾಡಿ ಅಂತ ಅವರ ಸ್ವಾಮೀಜಿಗಳು ಹೇಳುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಮುಖ್ಯಮಂತ್ರಿಗಳನ್ನು ಮಾಡಿವುದಕ್ಕಾಗುತ್ತದೆಯೇ. ಸ್ವಾಮೀಜಿ ಹೇಳಿಕೆ ಪ್ರಜಾಪ್ರಭುತ್ವಕ್ಕೆ, ಹಿಂದುಳಿದ ವರ್ಗಕ್ಕೆ ಮಾಡಿದ ಅವಮಾನ. ನಾನು ಸಿಎಂ ಪರವಾಗಿ ಅಂತಲ್ಲ. ಪ್ರಜಾಪ್ರಭುತ್ವದ ಪರವಾಗಿ ಇದ್ದೇನೆ ಎಂದು ರಾಜಣ್ಣ ಹೇಳಿದ್ರು.

ಸ್ವಾಮೀಜಿಗಳು ಒಟ್ಟಾಗಿ ಡಿ.ಕೆ. ಸುರೇಶ್ ಸೋಲಿಸಿದರು: ನಾನು ಹಗರಣ ಮಾಡಿದ್ರೆ ತನಿಖೆ ಮಾಡಲಿ. ಬಡವರ ಪರ ಸಿದ್ದರಾಮಯ್ಯ ಕೆಲಸ ಮಾಡ್ತಾರೆ. ಅದಕ್ಕೆ ಅವರ ಜೊತೆ ನಾವಿದ್ದೇವೆ‌. ಸ್ವಾಮೀಜಿಗಳದ್ದು ಅವರ ಜಾಗ ಅವರದ್ದು. ಎಂಪಿಯಾಗಿ ಡಿ.ಕೆ. ಸುರೇಶ್ ಪರಿಣಾಮಕಾರಿಯಾಗಿ ಕೆಲಸ ಮಾಡಿರೋರಲ್ಲಿ ಪ್ರಥಮ. ಯಾರು ಸೋಲಿಸಿದ್ದು. ಇವ್ರೆಲ್ಲಾ ಸ್ವಾಮೀಜಿಗಳು ಒಂದಾಗಿ ಸೋಲಿಸಿದ್ರು. ದೇವೇಗೌಡ್ರು ಹುಟ್ಟು ಹಾಕಿದ ಸ್ವಾಮೀಜಿಗಳು ಇವರು. ಯಾರನ್ನ ಸಿಎಂ ಮಾಡಬೇಕು ಅಂತಾ ಶಾಸಕರು, ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸ್ವಾಮೀಜಿಗಳು ಹೇಳಿದಂತೆ ಮಾಡೋಕೆ ಆಗಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಅಷ್ಟು ಆಸೆ ಇದ್ದರೆ, ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಡಿ.ಕೆ. ಸುರೇಶ್ - D K Suresh

Last Updated : Jun 29, 2024, 8:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.