ಹುಬ್ಬಳ್ಳಿ(ಧಾರವಾಡ) :ಜಿಲ್ಲೆಯಲ್ಲಿ ಕೊರೊನಾ ಅಬ್ಬರ ತಗ್ಗಿಸಲು ಜಿಲ್ಲಾಡಳಿತ ಹೋರಾಡುತ್ತಿರುವ ಬೆನ್ನಲ್ಲೇ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿವೆ.
ತಪ್ಪು ವಿಳಾಸ ನೀಡುತ್ತಿರುವ ಸೋಂಕಿತರ ವಿರುದ್ಧ ಕ್ರಮಕ್ಕೆ ಮುಂದಾದ ಜಿಲ್ಲಾಳಿತ
ಈವರೆಗೂ 32 ಸೋಂಕಿತರು ಸುಳ್ಳು ಹೇಳಿರುವುದು ಪತ್ತೆಯಾಗಿದೆ. ಸೋಂಕಿತರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಸಿ ಅವರ ಸಿಡಿಆರ್ ವಿವರವನ್ನು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ನೀಡಿದೆ..
ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರಿಂದ ಗಂಟಲು ದ್ರವ ಪರೀಕ್ಷೆ ಮಾಡುವ ವೇಳೆ ಪಡೆಯಲಾಗುವ ವಿಳಾಸಗಳು ತಪ್ಪು ಎಂಬುದು ಬೆಳಕಿಗೆ ಬಂದಿದೆ. ಜಿಲ್ಲಾಡಳಿತಕ್ಕೆ ಹೊಸ ತಲೆನೋವು ಶುರುವಾದಂತಾಗಿದೆ. ಇನ್ನೂ ಜಿಲ್ಲಾಡಳಿತವೂ ಕೈಕಟ್ಟಿ ಕುಳಿತುಕೊಳ್ಳದೆ ಜಿಲ್ಲೆಯಲ್ಲಿ ತಪ್ಪು ವಿಳಾಸ ನೀಡಿದ ಸೋಂಕಿತರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಸಿದೆ.
ಈವರೆಗೂ 32 ಸೋಂಕಿತರು ಸುಳ್ಳು ಹೇಳಿರುವುದು ಪತ್ತೆಯಾಗಿದೆ. ಸೋಂಕಿತರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಸಿ ಅವರ ಸಿಡಿಆರ್ ವಿವರವನ್ನು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ನೀಡಿದೆ. ಆದರೆ, ಈವರೆಗೂ ಯಾರೊಬ್ಬರ ವಿವರವೂ ದೊರಕಿಲ್ಲವಾದ್ದರಿಂದ ಜಿಲ್ಲೆಯಲ್ಲಿ ಆತಂಕ ಸೃಷ್ಠಿಯಾಗಿದೆ.