ಕರ್ನಾಟಕ

karnataka

ETV Bharat / state

ಧಾರವಾಡ: ಸಿಎಂ ನೇರ ಸಂವಾದದಲ್ಲಿ ಮನದಾಳ ಹಂಚಿಕೊಂಡ ಕಾರ್ಮಿಕ

ಧಾರವಾಡದ ಜಿಲ್ಲಾ ಪಂಚಾಯ್ತಿ​ ಸಭಾಂಗಣದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ‌ ಬೈರಿದೇವರಕೊಪ್ಪ ಗ್ರಾಮದ ದುರಗಪ್ಪ ಎಂಬ ಕಟ್ಟಡ ಕಾರ್ಮಿಕ‌ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

Dharwad: Labor talked to CM on live
ಧಾರವಾಡ: ಸಿಎಂ ನೇರ ಸಂವಾದದಲ್ಲಿ ತಮ್ಮ ಮನದಾಳ ಹಂಚಿಕೊಂಡ ಕಾರ್ಮಿಕ

By

Published : Jul 27, 2020, 9:35 PM IST

ಧಾರವಾಡ:ಜನಸ್ನೇಹಿ ಆಡಳಿತದ ಒಂದು ಸವಾಲುಗಳ ವರ್ಷ ಪರಿಹಾರದ ಸ್ಪರ್ಶ ಕಾರ್ಯಕ್ರಮದ ಸಂವಾದದಲ್ಲಿ ಧಾರವಾಡದ ಕಟ್ಟಡ ಕಾರ್ಮಿಕನೊಬ್ಬನನ್ನು ಮುಖ್ಯಮಂತ್ರಿ ‌ಬಿ.ಎಸ್. ಯಡಿಯೂರಪ್ಪ ಮಾತನಾಡಿಸಿದರು.

ಧಾರವಾಡ: ಸಿಎಂ ನೇರ ಸಂವಾದದಲ್ಲಿ ತಮ್ಮ ಮನದಾಳ ಹಂಚಿಕೊಂಡ ಕಾರ್ಮಿಕ

ಧಾರವಾಡದ ಜಿಲ್ಲಾ ಪಂಚಾಯ್ತಿ​ ಸಭಾಂಗಣದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ‌ ಬೈರಿದೇವರಕೊಪ್ಪ ಗ್ರಾಮದ ದುರಗಪ್ಪ ಎಂಬ ಕಟ್ಟಡ ಕಾರ್ಮಿಕ‌ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಇದಕ್ಕೂ‌ ಮೊದಲು ಸರ್ಕಾರದ ಸಾಧನೆ ಹಾದಿಯ ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬಿಡುಗಡೆಗೊಳಿಸಿದರು. ‌

ಕಾರ್ಯಕ್ರಮದಲ್ಲಿ ಸಚಿವರಿಗೆ ಬಿಜೆಪಿ ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಿ. ಎಂ ನಿಂಬಣ್ಣವರ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು.

ABOUT THE AUTHOR

...view details