ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಸಿಬಿಐ ಬಗ್ಗೆ ಡಿಕೆಶಿಗೆ ದೂರು ನೀಡಿದ್ದ ಕೈ ಕಾರ್ಯಕರ್ತರು..! - DK Shivakumar latest news

ಕಳೆದ 3 ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧಾರವಾಡದ ಕೃಷಿ ವಿವಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೈ ಕಾರ್ಯಕರ್ತರು ಸಿಬಿಐ ಅಧಿಕಾರಿಗಳ ತೊಂದರೆ ಬಗ್ಗೆ ತಿಳಿಸಿದ್ದರು. ಇದೀಗ ಡಿಕೆಶಿ ಮನೆ ಮೇಲೆಯೇ ದಾಳಿ ನಡೆಸಿದ್ದಾರೆ.

ಡಿಕೆಶಿ ಮುಂದೆ ಅಳಲು ತೋಡಿಕೊಂಡ ಕಾರ್ಯಕರ್ತರು
ಡಿಕೆಶಿ ಮುಂದೆ ಅಳಲು ತೋಡಿಕೊಂಡ ಕಾರ್ಯಕರ್ತರು

By

Published : Oct 5, 2020, 2:32 PM IST

ಧಾರವಾಡ: ಡಿ.ಕೆ ಶಿವಕುಮಾರ್ ಧಾರವಾಡಕ್ಕೆ ಬಂದಾಗಸಿಬಿಐ ಅಧಿಕಾರಿಗಳ ತೊಂದರೆ ಬಗ್ಗೆಕಾಂಗ್ರೆಸ್ ಕಾರ್ಯಕರ್ತರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಬಳಿ ಅಹವಾಲು ಸಲ್ಲಿಸಿದ್ದರು. ಆದರೆ, ಇದೀಗ ಡಿಕೆಶಿ ಅವರ ಮನೆ ಮೇಲೆಯೇ ದಾಳಿ ನಡೆಸಿದೆ.

ಕಳೆದ 3 ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧಾರವಾಡದ ಕೃಷಿ ವಿವಿಗೆ ಆಗಮಿಸಿದ್ದು, ಈ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಸಿಬಿಐನಿಂದ ಉಂಟಾದ ಸಮಸ್ಯೆಯ ಬಗ್ಗೆ ಅಳಲು ತೋಡಿಕೊಂಡಿದ್ದರು.

ಡಿಕೆಶಿ ಮುಂದೆ ಅಳಲು ತೋಡಿಕೊಂಡ ಕಾರ್ಯಕರ್ತರು

ಸಿಬಿಐ ತನಿಖೆ ವಿಚಾರ ತನಿಖೆಯಲ್ಲಿ ಅನೇಕ ಕೈ ಮುಖಂಡರು, ಕಾರ್ಯಕರ್ತರ ವಿಚಾರಣೆ ನಡೆಸಲಾಗುತ್ತಿದ್ದು, ಇದೇ ವಿಚಾರವನ್ನು ಕಾರ್ಯಕರ್ತರು ಈ ಹಿಂದೆ ಡಿಕೆಶಿ ಮುಂದಿಟ್ಟಿದ್ದರು. ಸಿಬಿಐ ತೊಂದರೆ ನಿವಾರಿಸುವಂತೆ ಕೈ ಪಕ್ಷದ ಕಾರ್ಯಕರ್ತರು ಅಳಲು ತೋಡಿಕೊಂಡಿದ್ದರು.

ABOUT THE AUTHOR

...view details