ಕರ್ನಾಟಕ

karnataka

ETV Bharat / state

ನಡು ರಸ್ತೆಯಲ್ಲಿ ಸುಟ್ಟು ಕರಕಲಾದ ಕಾರು: ಇಬ್ಬರು ಪ್ರಾಣಾಪಾಯದಿಂದ ಪಾರು - ಕಾರು

ನಡು ರಸ್ತೆಯಲ್ಲಿ ಕಾರೊಂದು ಹೊತ್ತಿ ಉರಿದಿರುವ ಘಟನೆ ಧಾರವಾಡದ ಉದಯ ಹಾಸ್ಟೆಲ್‌ ಸಮೀಪ ನಡೆದಿದೆ.

dharwad-car-burned-in-the-road
ನಡು ರಸ್ತೆಯಲ್ಲಿ ಸುಟ್ಟು ಕರಕಲಾದ ಕಾರು

By

Published : Jun 10, 2021, 8:43 PM IST

ಧಾರವಾಡ:ರಸ್ತೆಯಲ್ಲಿ ಕಾರೊಂದು ಹೊತ್ತಿ ಉರಿದಿದೆ. ಅದೃಷ್ಟವಶಾತ್​ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಉದಯ ಹಾಸ್ಟೆಲ್‌ ಸಮೀಪ ನಡೆದಿದೆ.

ನಡು ರಸ್ತೆಯಲ್ಲಿ ಸುಟ್ಟು ಕರಕಲಾದ ಕಾರು


ಕಾರಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಇಬ್ಬರು ಕೂಡಲೇ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವುದರೊಳಗಾಗಿ ಕಾರು ಸುಟ್ಟು ಕರಕಲಾಗಿದೆ. ಕಾರು ಯಾರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿಲ್ಲ. ಧಾರವಾಡದ ರೈಲ್ವೆ ನಿಲ್ದಾಣದ ರಸ್ತೆಯಿಂದ ಉದಯ್ ಸರ್ಕಲ್ ಬರುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

ಓದಿ:ಕೋವಿಡ್ ನಿಯಮ ಉಲ್ಲಂಘನೆ ಆರೋಪ: ಸಿಎಂ ಕರ್ತವ್ಯ ನಿರ್ವಹಣೆ ವಾದ ಒಪ್ಪಿದ ಹೈಕೋರ್ಟ್

ABOUT THE AUTHOR

...view details