ಕರ್ನಾಟಕ

karnataka

ETV Bharat / state

'ಗಲಾಟೆ ಪೂರ್ವನಿಯೋಜಿತವೋ ಅಲ್ಲವೋ ಅನ್ನೋದು ತನಿಖೆಯ ನಂತರ ಗೊತ್ತಾಗಲಿದೆ'

ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಎದುರಿನ ಗಲಾಟೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ತಪ್ಪಿತಸ್ಥರು ಯಾರು, ತಪ್ಪಿತಸ್ಥರಲ್ಲದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

By

Published : Apr 17, 2022, 4:42 PM IST

ಜಿಲ್ಲಾಧಿಕಾರಿ ನಿತೀಶ್ ಪಾಟೀಲ್
ಜಿಲ್ಲಾಧಿಕಾರಿ ನಿತೀಶ್ ಪಾಟೀಲ್

ಹುಬ್ಬಳ್ಳಿ:ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರಿನ ಗಲಾಟೆಯಲ್ಲಿ ಈಗಾಗಲೇ 40 ಜನರನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಹೇಳಿದರು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.


ಶಾಂತಿಯಿಂದ ಇದ್ದ ಹುಬ್ಬಳ್ಳಿಯಲ್ಲಿ ಕಿಡಿಗೇಡಿಗಳಿಂದ ಅಶಾಂತಿ ಸೃಷ್ಟಿಯಾಗಿದೆ: ಶಾಸಕ ಅಬ್ಬಯ್ಯ ಬೇಸರ

'2009ರಿಂದ ಹುಬ್ಬಳ್ಳಿ ಬಹಳ ಶಾಂತಿ ಸೌಹಾರ್ದತೆಯಿಂದ ಕೂಡಿತ್ತು. ಆದರೆ, ಈಗ ಕಿಡಿಗೇಡಿಗಳ ಕೃತ್ಯದಿಂದ ಈ ರೀತಿ ಅಶಾಂತಿ ಉಂಟಾಗಿದೆ. ಶಾಂತಿ ಸಭೆ ಮಾಡುವ ಮೂಲಕ ಅವಳಿನಗರದಲ್ಲಿ ಮತ್ತೆ ಶಾಂತಿ‌ ನೆಲೆಸುವಂತೆ ಮಾಡಬೇಕು' ಎಂದು ಶಾಸಕ ಪ್ರಸಾದ ಅಬ್ಬಯ್ಯ ಮನವಿ ಮಾಡಿದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸೂಫ್‌ ಸವಣೂರು ಮಾತನಾಡಿ, 'ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ. ಆದರೆ, ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ‌. ಅಂಥವರ ಬಗ್ಗೆ ಮರುಪರಿಶೀಲನೆ ನಡೆಸಿ ಬಿಡುಗಡೆ ಮಾಡಲಿ' ಎಂದರು.

ಇದನ್ನೂ ಓದಿ:ತೈಲ ಬೆಲೆ ಬಹುತೇಕ ಯಥಾಸ್ಥಿತಿ.. ಹೀಗಿದೆ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ

ABOUT THE AUTHOR

...view details