ಧಾರವಾಡ:ಪ್ರವಾಹದಲ್ಲಿ ಮನೆ ಮಠ ಕಳೆದುಕೊಂಡಿರುವ ಸಂತ್ರಸ್ತರಿಗೆ ಹಾಗೂ ಬಿದ್ದ ಮನೆಯಲ್ಲಿ ದಾಖಲೆ ಕಳೆದುಕೊಂಡವರಿಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅಭಯ ಹಸ್ತ ನೀಡಿದ್ದಾರೆ.
ದಾಖಲೆ ಕಳೆದು ಹೋಗಿದ್ರೂ ಪರಿಹಾರ ನೀಡುತ್ತೇವೆ: ಡಿಸಿ - DC Deepa Cholana
ಈ ವರ್ಷ ಉಂಟಾದ ಭೀಕರ ಪ್ರವಾಹದಿಂದಾಗಿ ಜನರು ತಮ್ಮ ಮನೆ, ಆಸ್ತಿಗಳನ್ನೆಲ್ಲಾ ಕಳೆದುಕೊಂಡಿದ್ದು, ಪರಿಹಾರ ಪಡೆಯಲು ದಾಖಾಲಾತಿಗಳೂ ಇಲ್ಲದಂತಾಗಿದೆ. ಆದ್ದರಿಂದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್, ಹಳೆಯ ದಾಖಲಾತಿಗಳನ್ನೇ ಪರಿಶೀಲಿಸಿ ಪರಿಹಾರ ನೀಡುವುದಗಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ದೀಪಾ ಚೋಳನ
ಧಾರವಾಡದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 3 ದಾಖಲಾತಿಗಳನ್ನು ಕೇಳಿದ್ದು ನಿಜ. ಆದರೆ ಬಿದ್ದ ಮನೆಯಲ್ಲಿ ಪ್ರವಾಹದ ಹೊಡೆತಕ್ಕೆ ದಾಖಲಾತಿಗಳು ಹೋಗಿದ್ದು ಗಮನಕ್ಕೆ ಬಂದಿದೆ. ಇನ್ನು ಮುಂದೆ ದಾಖಲಾತಿ ಕೇಳುವುದಿಲ್ಲ. ಬೇರೆ ಬೇರೆ ಕೆಲಸಕ್ಕೆ ದಾಖಲಾತಿಗಳನ್ನು ಸಲ್ಲಿಸಿರುತ್ತಾರೆ. ಅವುಗಳನ್ನು ಉಪಯೋಗಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ 1036 ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಸರ್ಕಾರಕ್ಕೆ 177 ಕೋಟಿ ಪರಿಹಾರ ಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.