ಕರ್ನಾಟಕ

karnataka

ETV Bharat / state

ಧಾರವಾಡದ ಕೊರೊನಾ ರೋಗಿ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್​: ಸಂತಸ ವ್ಯಕ್ತಪಡಿಸಿದ ಸಚಿವ ಶೆಟ್ಟರ್

ಕೊರೊನಾ ಪ್ರಕರಣದಲ್ಲಿ ಧಾರವಾಡ ಝೀರೋ‌ ಸ್ಥಾನಕ್ಕೆ ಬಂದಿದೆ. ಉಳಿದ ಕೆಲ ಶಂಕಿತರು ಹೋಮ್ ಕ್ವಾರಂಟೈನ್​​ನಲ್ಲಿ ಇದ್ದಾರೆ. ದೆಹಲಿಯಿಂದ ಬಂದವರದೂ ವರದಿ ನೆಗಟಿವ್ ಬಂದಿವೆ. ಈ ರೋಗದ ಬಗ್ಗೆ ಕೆಲವರಿಗೆ ಹೆದರಿಕೆ ಇರುವುದರಿಂದ ನಿಮ್ಹಾನ್ಸ್‌ನಲ್ಲಿ ಸಮಾಲೋಚನಾ ಕೇಂದ್ರ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

By

Published : Apr 6, 2020, 4:51 PM IST

Corona Patient Release
ಜಗದೀಶ್ ಶೆಟ್ಟರ್

ಧಾರವಾಡ:ಜಿಲ್ಲೆಯಲ್ಲಿ ಆರಂಭದಲ್ಲೇ ಒಂದು ಕೇಸ್ ಪಾಸಿಟಿವ್ ಇತ್ತು. ಬಹಳ ಸಂತೋಷದ ವಿಷಯ ಅಂದ್ರೆ ಅವರಿಗೆ ಕಿಮ್ಸ್‌ನಲ್ಲಿ ನಿರಂತರ ಚಿಕಿತ್ಸೆ ಕೊಡಿಸಿ ಗುಣಮುಖ ಮಾಡಲಾಗಿದ್ದು, ನಿನ್ನೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.

ಕೊರೊನಾ ಮಾನಸಿಕ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಪ್ರಕರಣದಲ್ಲಿ ಧಾರವಾಡ ಝೀರೋ‌ ಸ್ಥಾನಕ್ಕೆ ಬಂದಿದೆ. ಉಳಿದ ಕೆಲ ಶಂಕಿತರು ಹೋಮ್ ಕ್ವಾರಂಟೈನ್​​ನಲ್ಲಿ ಇದ್ದಾರೆ. ದೆಹಲಿಯಿಂದ ಬಂದವರದೂ ವರದಿ ನೆಗಟಿವ್ ಬಂದಿವೆ. ಈ ರೋಗದ ಬಗ್ಗೆ ಕೆಲವರಿಗೆ ಹೆದರಿಕೆ ಇರುವುದರಿಂದ ನಿಮ್ಹಾನ್ಸ್‌ನಲ್ಲಿ ಸಮಾಲೋಚನಾ ಕೇಂದ್ರ ಮಾಡಿದ್ದೇವೆ. ಸಂಶಯ ಇದ್ದವರೂ ದಿನದ 24 ಗಂಟೆ ಮಾಹಿತಿ ಪಡೆಯಬಹುದು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್

ಲಾಕ್‌ಡೌನ್ ಕಾರಣ ನಮ್ಮಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ.‌ ಆದರೆ ನಾವು ಸಂಪೂರ್ಣ ಮೈ ಮರೆಯಬಾರದು. 14ರವರೆಗೆ ಅನುಷ್ಠಾನ ಮಾಡಬೇಕು.‌ ತಾಳ್ಮೆ ಮತ್ತು ಸಂಯಮ ವಹಿಸಬೇಕು ಎಂದಿದ್ದಾರೆ.

ಕೋವಿಡ್ ಟೆಸ್ಟ್ ಲ್ಯಾಬ್ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಟೆಸ್ಟಿಂಗ್ ಲ್ಯಾಬ್ ಆಗಬೇಕಿದೆ.‌ ಈಗಾಗಲೇ ಪ್ರಸ್ತಾವನೆ ಇದೆ. ಅದು ಅಂತಿಮ ಹಂತಕ್ಕೆ ಬಂದಿತ್ತು.‌ ಆದರೆ ಮಂಗಳೂರಿನಲ್ಲಿ ಪಾಸಿಟಿವ್ ಕೇಸ್ ಬಂದ್ ಹಿನ್ನೆಲೆ ಲ್ಯಾಬ್ ಅಲ್ಲಿಗೆ ಹೋಯ್ತು ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details