ಧಾರವಾಡ:ದೋಷಪೂರಿತ ಲ್ಯಾಪ್‍ಟಾಪ್ ಪೂರೈಸಿದ ಲೆನೆವೊ ಕಂಪನಿಗೆ ಸೇವಾ ನ್ಯೂನ್ಯತೆ ಪ್ರಕರಣದಡಿ ಖರೀದಿದಾರ ವಿದ್ಯಾರ್ಥಿಗೆ 52 ಸಾವಿರ ರೂ. ಪರಿಹಾರ ಒದಗಿಸಲು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಧಾರವಾಡ ನಗರದ ಹತ್ತಿಕೊಳ್ಳದ ನಿವಾಸಿ ಮಹ್ಮದ್ ಪೀರಜಾದೆ ಎಂಬ ವಿದ್ಯಾರ್ಥಿ ಲೆನೆವೊ ಕಂಪನಿಯ ಲ್ಯಾಪ್‍ಟಾಪ್‍ನ್ನು 42,499 ರೂ.ಗಳಿಗೆ 2020ರ ನವೆಂಬರ್ 22ರಂದು ಖರೀದಿಸಿದ್ದರು. ಲ್ಯಾಪ್‍ಟಾಪ್‍ನಲ್ಲಿ ದೋಷ ಕಂಡು ಬಂದ ನಂತರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.