ಕರ್ನಾಟಕ

karnataka

ETV Bharat / state

ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ ನಮನ: RSS ಕಚೇರಿಗೂ CM ಬೊಮ್ಮಾಯಿ Visit - ಶಾಸಕ ಶಿವರಾಮ್ ಹೆಬ್ಬಾರ್

ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯ ಆರ್​​ಎಸ್​​ಎಸ್​​ ಕಚೇರಿಗೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಆರ್​​ಎಸ್​ಎಸ್​ ಉನ್ನತ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಅವರು ರಾಯಾಪುರದಲ್ಲಿರುವ ತಮ್ಮ ತಂದೆ- ತಾಯಿ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.

ಸಂಘದ ಹಿರಿಯ ಕಾರ್ಯಕರ್ತರು, ಬಿಜೆಪಿ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು
ಸಂಘದ ಹಿರಿಯ ಕಾರ್ಯಕರ್ತರು, ಬಿಜೆಪಿ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು

By

Published : Jul 29, 2021, 11:59 AM IST

Updated : Jul 29, 2021, 1:56 PM IST

ಹುಬ್ಬಳ್ಳಿ:ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆಯೇ ಇಲ್ಲಿನ ಆರ್​ಎಸ್​​ಎಸ್ ಕಚೇರಿಗೆ ಭೇಟಿ ನೀಡಿದರು. ಹುಬ್ಬಳ್ಳಿಯ ಆರ್​​ಎಸ್​​ಎಸ್​​​ ಶಕ್ತಿ ಕೇಂದ್ರ ಕೇಶವ ಕುಂಜಕ್ಕೆ ಆಗಮಿಸಿ, ಆರ್​​ಎಸ್​​ಎಸ್​​​ ಮುಖಂಡ ಮಂಗೇಶ ಭೇಂಡೆ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು.

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬೊಮ್ಮಾಯಿ, ಸಂಘದ ಹಿರಿಯರನ್ನು ಭೇಟಿ ಮಾಡಲು ಆಗಮಿಸಿದ್ದಾರೆ. ಈ ವೇಳೆ, ಶಾಸಕ ಶಿವರಾಮ್ ಹೆಬ್ಬಾರ್, ಸಂಘದ ಹಿರಿಯ ಕಾರ್ಯಕರ್ತರು, ಬಿಜೆಪಿ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ತಂದೆ- ತಾಯಿ ಸಮಾಧಿ ಸ್ಥಳಕ್ಕೆ ಭೇಟಿ- ನಮನ

ಹುಬ್ಬಳ್ಳಿ ಆರ್​ಎಸ್​​ಎಸ್ ಕಚೇರಿಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಇನ್ನು ನೂತನ ಸಿಎಂ ಬೊಮ್ಮಾಯಿ ತಮ್ಮ ತಂದೆ ಎಸ್​​​​ ಆರ್​ ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಹುಬ್ಬಳ್ಳಿ-ಧಾರವಾಡ ಮಧ್ಯೆ ಅಮರಗೋಳದಲ್ಲಿ ಸಿಎಂ ಅವರ ತಂದೆ - ತಾಯಿ ಸಮಾಧಿ ಸ್ಥಳವಿದೆ.

ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಿಎಂ, ತಂದೆ ತಾಯಿಯವರ ಆಶೀರ್ವಾದ ಎಲ್ಲಕ್ಕೂ ಮಿಗಿಲು. ಅಧಿಕಾರ ಸ್ವೀಕರಿಸಿದ ನಂತರ ಅವರ ಸಮಾಧಿಗಳ ದರ್ಶನ ಪಡೆದಿರುವೆ. ಅವರ ಆಶೀರ್ವಾದ ಪಡೆದುಕೊಂಡು ನಾಡಸೇವೆ ಮಾಡಲು ಶಕ್ತಿ ಕೊಡಲಿ ಎಂದು ಬೇಡಿಕೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ಹುಬ್ಬಳ್ಳಿ ನನ್ನ ಪ್ರೀತಿಯ ಊರು, ಇಲ್ಲಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಸಿಎಂ ಬೊಮ್ಮಾಯಿ ಭರವಸೆ

Last Updated : Jul 29, 2021, 1:56 PM IST

ABOUT THE AUTHOR

...view details