ಕರ್ನಾಟಕ

karnataka

ETV Bharat / state

58ನೇ ವಸಂತಕ್ಕೆ ಕಾಲಿಟ್ಟ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ..

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಯವರು 58ನೇ ವಸಂತಕದ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಹಾಗೂ ರಾಜಕೀಯ ಗಣ್ಯರು, ಸ್ನೇಹಿತರು ಸೇರಿ ಇನ್ನಿತರರು ಜೋಶಿಯವರಿಗೆ ಶುಭಾಶಯ ತಿಳಿಸಿದ್ದಾರೆ.

Prahlad joshi' 58th Birthday
58ನೇ ವಸಂತಕ್ಕೆ ಕಾಲಿಟ್ಟ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ

By

Published : Nov 27, 2019, 6:07 PM IST

ಬೆಂಗಳೂರು/ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬವನ್ನು ಬಿಜೆಪಿ ನಾಯಕರು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಇತ್ತ ಮುಖ್ಯಮಂತ್ರಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಜೋಶಿಯವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ಪ್ರಹ್ಲಾದ್​​ ಜೋಶಿ ಹುಟ್ಟು ಹಬ್ಬದ ಪ್ರಯುಕ್ತ ಸಿಹಿ ವಿತರಣೆ..

ಜೋಶಿಯವರ ಹುಟ್ಟು ಹಬ್ಬದ ಅಂಗವಾಗಿ ಹುಬ್ಬಳ್ಳಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.ಜೋಶಿಯವರ ಕಚೇರಿ ಎದುರು ಭಾಗದಲ್ಲಿ ಸಾರ್ವಜನಿಕರಿಗೆ ಉಪಹಾರ ಮತ್ತು ಬ್ರೆಡ್​​ ವಿತರಿಸುವ ಮೂಲಕ ತಮ್ಮ 58ನೇ ಹುಟ್ಟು ಹಬ್ಬವನ್ನು ಜೋಶಿ ಆಚರಿಸಿಕೊಂಡರು.

ಸಿಎಂ ಯಡಿಯೂರಪ್ಪ ಟ್ವೀಟ್​​ ಮೂಲಕ ಜೋಶಿಯವರಿಗೆ ಶುಭಾಶಯ ತಿಳಿಸಿದ್ದು, ಆತ್ಮೀಯರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು‌. ದೇವರು ತಮಗೆ ಆಯುರಾರೋಗ್ಯ ಕೊಟ್ಟು‌ ಮಗದಷ್ಟು ಜನ ಸೇವೆ ಮಾಡುವ ಶಕ್ತಿ ಕರುಣಿಸಲಿ. ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

ABOUT THE AUTHOR

...view details