ಕರ್ನಾಟಕ

karnataka

ETV Bharat / state

ಧಾರವಾಡ ಪೊಲೀಸರ ಭರ್ಜರಿ ಕಾರ್ಯಾಚರಣೆ.. ಚಾಲಾಕಿ ಬೈಕ್ ಕಳ್ಳರು ಅಂದರ್​​ - darwad Bike theft case

ಗಾರೆ ಕೆಲಸ ಮಾಡುತ್ತಲೇ ನಗರದಲ್ಲಿ ನಿಂತಿರುವ ಬೈಕ್​ಗಳನ್ನು ಎಗರಿಸಿ ಮಾರಾಟ ಮಾಡುತ್ತಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ..

Bike thieves arrested in darwad
ಧಾರವಾಡ ಪೊಲೀಸರ ಭರ್ಜರಿ ಕಾರ್ಯಾಚರಣೆ: ಚಾಲಾಕಿ ಬೈಕ್ ಕಳ್ಳರು ಅಂದರ್​​

By

Published : Oct 23, 2020, 7:53 PM IST

ಧಾರವಾಡ :ಸುಮಾರು 15ಕ್ಕೂ ಹೆಚ್ಚು ಸ್ಪ್ಲೆಂಡರ್​ ಬೈಕ್ ಕಳ್ಳತನ ಮಾಡಿದ್ದ ಚಾಲಾಕಿ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಕ್ ಕಳ್ಳರ ಬಂಧನ

ಧಾರವಾಡ ರಾಜೀವಗಾಂಧಿ ನಗರದ ಅಭಿಷೇಕ (20) ಹಾಗೂ ಈರಣಗೌಡ (20) ಎಂಬ ಯುವಕರು 15ಕ್ಕೂ ಹೆಚ್ಚು ಬೈಕ್​​​ಗಳನ್ನು ಕಳ್ಳತನ ಮಾಡಿದ್ದರು. ಧಾರವಾಡದ ವಿದ್ಯಾಗಿರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಗಾರೆ ಕೆಲಸ ಮಾಡುತ್ತಲೇ ನಗರದಲ್ಲಿ ನಿಂತಿರುವ ಬೈಕ್​ಗಳನ್ನು ಎಗರಿಸಿ ಮಾರಾಟ ಮಾಡುತ್ತಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ಎಸಿಪಿ ಅನುಷಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details