ಹುಬ್ಬಳ್ಳಿ:ನಗರದ ಖಾಗಿ ಹೊಟೇಲ್ನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ಜಿಲ್ಲೆಯ ಪ್ರಮುಖ ನಾಯಕರು ಗೈರಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬಿಜೆಪಿ ಸಮಾಲೋಚನ ಸಭೆಗೆ ಬಳ್ಳಾರಿ ನಾಯಕರು ಗೈರು ಸಚಿವ ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ಹೊಸಪೇಟೆ ಪರಾಜೀತ ಅಭ್ಯರ್ಥಿ ಗವಿಯಪ್ಪ ಸೇರಿದಂತೆ ಹಲವರು ಸಭೆಗೆ ಗೈರಾಗಿದ್ದು, ಬಳ್ಳಾರಿ ಜಿಲ್ಲೆಯ ಕೆಲ ನಾಯಕರು ಮಾತ್ರ ಭಾಗಿಯಾಗಿದ್ದಾರೆ.
ಆನಂದ್ ಸಿಂಗ್ ರಾಜೀನಾಮೆಯಿಂದ ವಿಜಯನಗರ (ಹೊಸಪೇಟೆ) ಕ್ಷೇತ್ರದ ಶಾಸಕ ಸ್ಥಾನ ತೆರವಾಗಿದ್ದು, ಮುಂದೆ ಉಪಚುನಾವಣೆ ನಡೆಯಲಿದೆ. ಬಿಜೆಪಿ ಸಮಾಲೋಚನಾ ಸಭೆಗೆ ಜಿಲ್ಲೆಯ ಎಲ್ಲಾ ನಾಯಕರಿಗೂ ಅಹ್ವಾನ ನೀಡಿದ್ದರೂ ಸಭೆಗೆ ಗೈರಾಗಿರುವುದಕ್ಕೆ ಆನಂದ ಸಿಂಗ್ ಅವರ ಮೇಲೆ ಬಿಜೆಪಿ ನಾಯಕರ ಅಸಮಾಧಾನ ಕಾರಣ ಎನ್ನಲಾಗಿದೆ.
ಆನಂದ್ ಸಿಂಗ್, ಹೊಸಪೇಟೆಯನ್ನ ಜಿಲ್ಲೆಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಶ್ರೀರಾಮುಲು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.