ಕರ್ನಾಟಕ

karnataka

ETV Bharat / state

ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನು ಸಿದ್ದರಾಮಯ್ಯ ಮರೆಯಬಾರದು: ಸಚಿವ ಬಿ ಸಿ ಪಾಟೀಲ್ - ಸಿದ್ದರಾಮಯ್ಯ ಆರ್​ಎಸ್​ಎಸ್​ ಹೇಳಿಕೆ

ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನು ಮರೆಯಬಾರದು. ಪ್ರತಿಯೊಬ್ಬರೂ ಚಡ್ಡಿ ಹಾಕಿಕೊಳ್ಳಲೇಬೇಕು. ಚಡ್ಡಿ, ಪಂಚೆ ಅನ್ನೋದು ಅಸಂಸ್ಕೃತ ಮಾತುಗಳು. ಇವೆಲ್ಲವೂ ಕೀಳು ಮಟ್ಟದ ಪ್ರಚಾರ ಎಂದು ಚಡ್ಡಿ ವಿವಾದದ ಕುರಿತು ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

Minister BC Patil
ಸಚಿವ ಬಿ.ಸಿ ಪಾಟೀಲ್

By

Published : Jun 7, 2022, 4:25 PM IST

Updated : Jun 7, 2022, 6:58 PM IST

ಧಾರವಾಡ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನು ಮರೆಯಬಾರದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಟಾಂಗ್ ನೀಡಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಮಾತನಾಡಲು ಬೇರೆ ವಿಷಯವಿಲ್ಲ. ಹೀಗಾಗಿ ಆರ್​ಎಸ್​ಎಸ್ ಬಗ್ಗೆ ಪದೇ ಪದೆ ಟೀಕೆ ಮಾಡುತ್ತಿದ್ದಾರೆ ಎಂದರು.

ಸಚಿವ ಬಿ.ಸಿ ಪಾಟೀಲ್

ಚಡ್ಡಿ, ಪಂಚೆ ಅನ್ನೋದು ಅಸಂಸ್ಕೃತ ಮಾತುಗಳು. ಪ್ರತಿಯೊಬ್ಬರೂ ಚಡ್ಡಿ ಹಾಕಿಕೊಳ್ಳಲೇಬೇಕು. ಪಂಚೆ ಒಳಗೆ ಚಡ್ಡಿ ಇರುತ್ತೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಇವೆಲ್ಲವೂ ಕೀಳು ಮಟ್ಟದ ಪ್ರಚಾರ. ಚಡ್ಡಿ ಮತ್ತು ಪಂಚೆ ಬಗ್ಗೆ ಮಾತಾಡೋದು ಸಂಸ್ಕೃತರ ಲಕ್ಷಣ ಅಲ್ಲ. ಪ್ರಚಾರಕ್ಕೋಸ್ಕರ ಬಾಯಿಗೆ ಬಂದ ಹಾಗೆ ಮಾತಾಡಬಾರದು. ಹೀಗೆಲ್ಲ ಮಾತನಾಡಿ ಕೀಳು ಪ್ರಚಾರ ತೆಗೆದುಕೊಳ್ಳೋದನ್ನು ಬಂದ್ ಮಾಡಬೇಕು ಎಂದು ಹರಿಹಾಯ್ದರು.

ಇದನ್ನೂ ಓದಿ:ಆರ್​ಎಸ್​ಎಸ್-ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದರಾಮಯ್ಯಗೆ ಇರುವ ಗೌರವವೂ ಹಾಳಾಗುತ್ತೆ: ಬಿಎಸ್​ವೈ

ರಸಗೊಬ್ಬರ ಸಮಸ್ಯೆ ಬಗ್ಗೆ ಮಾತನಾಡಿ, ಈಗಾಗಲೇ ಎಲ್ಲ ಭಾಗದಲ್ಲಿ ಗೊಬ್ಬರ ಸಮಸ್ಯೆ ನಿವಾರಣೆ ಆಗಿದೆ. ಒಂದಿಷ್ಟು ಕಡೆ ಗೊಬ್ಬರವನ್ನು ತೆಗೆದಿಟ್ಟು ಸ್ಟಾಕ್ ಇಲ್ಲ ಅಂತಿದ್ದರು. ಅವರೆಲ್ಲ ಈಗ ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಗೊಬ್ಬರ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು.

Last Updated : Jun 7, 2022, 6:58 PM IST

ABOUT THE AUTHOR

...view details