ಧಾರವಾಡ: ವಿಧಾನ ಪರಿಷತ್ನಲ್ಲಿನ ಗಲಾಟೆ ವಿಚಾರ ನನ್ನ ಜೀವನದಲ್ಲಿ ಅದರಷ್ಟು ನಾಚಿಕೆಯಾದ ವಿಷಯ ಯಾವುದೂ ಆಗಿಲ್ಲ. ಅಷ್ಟೊಂದು ನಾಚಿಕೆಯಾಗಿ ನನ್ನ ಕಣ್ಣಲ್ಲಿ ನೀರು ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನ ಪರಿಷತ್ ಗಲಾಟೆ ಕುರಿತು ಮಾತನಾಡಿದ ಹೊರಟ್ಟಿ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಮಾದರಿಯಾದ ಮೇಲ್ಮನೆಯಲ್ಲಿ ಇಂತಹ ಘಟನೆ ನಡೆದದ್ದು ದುರದೃಷ್ಟಕರ. ನಾನು ಈಗಾಗಲೇ ರಾಜ್ಯದ ಜನರ ಕ್ಷಮೆ ಸಹ ಕೇಳಿದ್ದೇನೆ. ವಿಧಾನ ಪರಿಷತ್ ಅನ್ನೋದು ಮುನ್ಸಿಪಾಲಿಟಿ ಲೆವೆಲ್ಗೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ವಿಧಾನ ಪರಿಷತ್ ದೇಶದಲ್ಲಿ ಅತ್ಯಂತ ಗೌರವ ಪಡೆದಿದೆ. 113 ವರ್ಷದ ಇತಿಹಾಸದ ಈ ಪರಿಷತ್ನಲ್ಲಿ ಹೀಗೆ ಆಗಿದ್ದು ನೋವಾಗಿದೆ. ಗಲಾಟೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಅಂತ ಒತ್ತಾಯ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ಪರಿಷತ್ ಗಲಾಟೆಗೆ ಖಂಡನೆ: ನಾಯಿಗಳ ಮೆರವಣಿಗೆ ಮಾಡಿದ ವಾಟಾಳ್
ವಿದ್ಯಾಗಮ ಆರಂಭ ಹಿನ್ನೆಲೆ ಸಚಿವರ ಜೊತೆ ಈಗಾಗಲೇ ಮಾತನಾಡಿದ್ದೇವೆ. 50 ವಿದ್ಯಾರ್ಥಿಗಳ ಬದಲು 10 ವಿದ್ಯಾರ್ಥಿಗಳನ್ನು ಬೇರೆ ಬೇರೆ ಕೂರಿಸಿ ಪಾಠ ಮಾಡೋದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದರು.