ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಬಲಿದಾನ ದಿನಾಚರಣೆ.. ದೇಶಭಕ್ತರಿಗೆ ವಿಶೇಷ ಗೌರವ

ಹುಬ್ಬಳ್ಳಿಯ ನವನಗರದ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಬಲಿದಾನ ದಿನಾಚರಣೆಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ಮೆರವಣಿಗೆಯಲ್ಲಿ ಸುತಗಟ್ಟಿ ಶಾಲೆಯ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿದೆ.

By

Published : Mar 21, 2022, 8:30 PM IST

Updated : Mar 21, 2022, 8:39 PM IST

balidhan-divas-celebrated-in-hubballi
ಹುಬ್ಬಳ್ಳಿಯಲ್ಲಿ ಬಲಿದಾನ ದಿನ ಆಚರಣೆ

ಹುಬ್ಬಳ್ಳಿ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಅರ್ಪಿಸಿದ ದೇಶಭಕ್ತರಾದ ಭಗತ್​ಸಿಂಗ್, ರಾಜಗುರು ಸುಖದೇವ ಅವರ ಬಲಿದಾನ ದಿನದ ಅಂಗವಾಗಿ ಭಗತ್​ಸಿಂಗ್ ಯುವಕ ಮಂಡಳಿಯ ವತಿಯಿಂದ ನಗರದಲ್ಲಿ ಪಂಜಿನ ಮೆರವಣಿಗೆ ಜೊತೆಗೆ ಸಾಕ್ಷ್ಯಚಿತ್ರ ಮೆರವಣಿಗೆ ಸಹ ಮಾಡಲಾಯಿತು.

ಹುಬ್ಬಳ್ಳಿಯಲ್ಲಿ ಬಲಿದಾನ ದಿನಾಚರಣೆ ಆಚರಿಸಲಾಯಿತು

ಮೆರವಣಿಗೆ ಉದ್ದಕ್ಕೂ ಭಗತ್​ಸಿಂಗ್, ರಾಜಗುರು ಹಾಗೂ ಸುಖ್​ದೇವ್​ ಅವರ ಹೋರಾಟದ ಚಿತ್ರಣ ಹಾಗೂ ದೇಶಭಕ್ತರು ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಸಾಕ್ಷ್ಯಚಿತ್ರದ ಮೂಲಕ ಯುವಪೀಳಿಗೆಗೆ ದೇಶಭಕ್ತರ ಪರಿಚಯಿಸುವ ಮೂಲಕ ವಿನೂತನವಾಗಿ ಬಲಿದಾನ ದಿನವನ್ನು ಆಚರಿಸಲಾಯಿತು.

ಹುಬ್ಬಳ್ಳಿಯ ನವನಗರದ ಹನುಮಂತ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ್ದು, ಮೆರವಣಿಗೆಯಲ್ಲಿ ಸುತಗಟ್ಟಿ ಶಾಲೆಯ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಾರ್ಥವಾಗಿ ಆಚರಿಸುವ ಬಲಿದಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಮಹಿಳಾ ಮಂಡಳದ ಸದಸ್ಯರು, ಯುವಕರು ಹಾಗೂ ಮಕ್ಕಳು ಭಾಗವಹಿಸಿ ಯಶಸ್ವಿಗೊಳಿಸಿದರು.

ಓದಿ:ಹುಟ್ಟೂರಿಗೆ ನವೀನ್ ಮೃತದೇಹ ಆಗಮನ: ಪ್ರಧಾನಿಗೆ ಸಿಎಂ ಬೊಮ್ಮಾಯಿ ಧನ್ಯವಾದ

Last Updated : Mar 21, 2022, 8:39 PM IST

ABOUT THE AUTHOR

...view details