ಹುಬ್ಬಳ್ಳಿ (ಧಾರವಾಡ):ಹಳೇ ವೈಷಮ್ಯ ಹಿನ್ನೆಲೆ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಮರಿಪೇಟೆಯಲ್ಲಿ ಕಳೆದ ರಾತ್ರಿ ನಡೆದಿದೆ. ರಾಜು ಕಠಾರೆ ಅಲಿಯಾಸ್ ಬೆಂಗಳೂರು ರಾಜಾ ಹಲ್ಲೆಗೆ ಒಳಗಾದ ರೌಡಿಶೀಟರ್.
ಶನಿವಾರ ರಾತ್ರಿ ತಮ್ಮ ಮನೆಯ ಮುಂದೆ ನಿಂತಿರುವಾಗಲೇ ಮಾರಕಾಸ್ತ್ರಗಳಿಂದ ಆಗಮಿಸಿದ ಕಾಂತಾ ಕಠಾರೆ ಎನ್ನುವಾತ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಇದರಿಂದ ರಾಜು ಕಠಾರೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಜು ಕಠಾರೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.