ಕರ್ನಾಟಕ

karnataka

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಮಹಾನಗರ ಪಾಲಿಕೆ ಕ್ಲರ್ಕ್​!

ಶಂಕರ ಘೋಡಕೆ ಮಹಾನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾಗಿದ್ದು, ನಗರದ ಹಜರತ್​ ಅಲಿ ಮುಲ್ಲಾ ಎನ್ನುವವರಿಗೆ ಮನೆ ಕಂದಾಯ ಕಡಿತ ಮಾಡಲು 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

By

Published : Mar 9, 2021, 10:11 PM IST

Published : Mar 9, 2021, 10:11 PM IST

acb-raided-on-palike-clark-who-takes-bribe-from-man
75 ಸಾವಿರ ರೂ. ಲಂಚ ಪಡೆಯುವಾಗ ಮಹಾನಗರ ಪಾಲಿಕೆ ಕ್ಲರ್ಕ್​ ಎಸಿಬಿ ಬೆಲೆಗೆ

ಹುಬ್ಬಳ್ಳಿ:ಮನೆ ಕಂದಾಯ ವಿಚಾರವಾಗಿ ವ್ಯಕ್ತಿಯೋರ್ವನಿಂದ ಲಂಚ ಪಡೆಯುವಾಗ ಮಹಾನಗರ ಪಾಲಿಕೆ ಕ್ಲರ್ಕ್​​ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಹಾನಗರ ಪಾಲಿಕೆಯ
ವಲಯ ಕಚೇರಿ ನಂ.11ರ ನೌಕರ ಶಂಕರ ಘೋಡಕೆ ಎಂಬಾತ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಶಂಕರ ಘೋಡಕೆ ಮಹಾನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾಗಿದ್ದು, ನಗರದ ಹಜರತ್​ ಅಲಿ ಮುಲ್ಲಾ ಎನ್ನುವವರಿಗೆ ಮನೆ ಕಂದಾಯ ಕಡಿತ ಮಾಡಲು 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತಂತೆ ಹಜರತ್ ಅಲಿಯವರು ಎಸಿಬಿಗೆ ದೂರು ನೀಡಿದ್ದರು. ಇಂದು ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಳಗಾವಿಯ ಉಪಮುಖ್ಯ ವಿದ್ಯುತ್ ಪರಿವೀಕ್ಷಕನ ಮನೆ ಮೇಲೆ ಎಸಿಬಿ ದಾಳಿ, ಅಪಾರ ಆಸ್ತಿ ಪತ್ತೆ

ABOUT THE AUTHOR

...view details