ಕರ್ನಾಟಕ

karnataka

ETV Bharat / state

ಬುರ್ಕಾ ಹಾಕಿಕೊಂಡು ಮಕ್ಕಳ‌ ಕೈ ಹಿಡಿದು ಎಳೆದ ಆರೋಪ: ಯುವಕನಿಗೆ ಧರ್ಮದೇಟು ನೀಡಿದ ಸ್ಥಳೀಯರು - ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ

ಯುವಕನೊಬ್ಬ ಬುರ್ಕಾ ಹಾಕಿಕೊಂಡು ಮಕ್ಕಳ ಕೈ ಹಿಡಿದು ಎಳೆದ ಆರೋಪದ ಮೇಲೆ ಆತನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಈ ಘಟನೆ ದಾವಣಗೆರೆಯ ಮಗಾನಹಳ್ಳಿ ರಸ್ತೆಯ ಬಳಿ ಇರುವ ರಜಾವುಲ್ ಮುಸ್ತಫಾ ನಗರದಲ್ಲಿ ನಡೆದಿದೆ.

young man was beaten
ಯುವಕನಿಗೆ ಧರ್ಮದೇಟು ನೀಡಿದ ಸ್ಥಳೀಯರು

By

Published : Nov 15, 2022, 2:42 PM IST

ದಾವಣಗೆರೆ: ಬುರ್ಕಾ ಹಾಕಿಕೊಂಡು ಸುತ್ತಾಡುತ್ತಾ ಯುವಕನೊಬ್ಬ ಮಕ್ಕಳ‌ ಕೈ ಹಿಡಿದು ಎಳೆದಾಡಿದ ಎಂಬ ಕಾರಣಕ್ಕೆ ಆತನಿಗೆ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ದಾವಣಗೆರೆ ನಗರದ ಮಗಾನಹಳ್ಳಿ ರಸ್ತೆಯ ಬಳಿ ಇರುವ ರಜಾವುಲ್ ಮುಸ್ತಫಾ ನಗರದಲ್ಲಿ ನಡೆದಿದೆ.

ರಜಾವುಲ್ ಮುಸ್ತಫಾ ನಗರದಲ್ಲಿ ಬುರ್ಕಾ ಧರಿಸಿದ್ದ ಯುವಕ ಅಲ್ಲೇ ನಿರಂತರವಾಗಿ ಸುತ್ತಾಡ್ತಾ, ಮಕ್ಕಳ‌ ಕೈ ಹಿಡಿದು ಎಳೆಯುವುದನ್ನ ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಆತನನ್ನು ಹಿಡಿದು ಧರ್ಮದೇಟು‌ ನೀಡಿ, ಪೊಲೀಸ್ ವಶಕ್ಕೆ ನೀಡಿದ್ದಾರೆ. ಇನ್ನೂ ಯುವಕನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಇವನು ಮೂಲತಃ ದಾವಣಗೆರೆ ನಗರದ ಹೊರವಲಯದ ಕಲ್ಪನಹಳ್ಳ ನಿವಾಸಿ ಎನ್ನಲಾಗ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವಕನಿಗೆ ಧರ್ಮದೇಟು ನೀಡಿದ ಸ್ಥಳೀಯರು

ಮಂಗಳವಾರ ಬೆಳಗ್ಗೆ ಯುವಕ ಮಕ್ಕಳ ಕೈ ಹಿಡಿದು ಎಳೆದಾಡಿದ್ದಾನೆ. ಯುವಕನ ಚಲನವಲನದ ಬಗ್ಗೆ ಸ್ಥಳೀಯರಿಗೆ ಸಂಶಯ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಯುವಕನನ್ನು ಆಜಾದ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಇದು ಮಕ್ಕಳ ಕೇಸ್ ಆದ ಹಿನ್ನೆಲೆ ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆರೋಪಿ ಯುವಕ ಸದ್ಯ ಮಹಿಳಾ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ:ಮರಕ್ಕೆ ಕಟ್ಟಿಹಾಕಿ ವ್ಯಕ್ತಿ ಮೇಲೆ ಹಲ್ಲೆ.. ಬೆಳಗಾವಿ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥ ಸಾವು

ABOUT THE AUTHOR

...view details