ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಡಿ.11ಕೊನೆಯ ದಿನ ಆಗಿದ್ದರಿಂದ ಮೊದಲ ಹಂತದ ಚುನಾವಣೆಗೆ ದಾವಣಗೆರೆ, ಹೊನ್ನಾಳಿ, ಜಗಳೂರು ತಾಲೂಕುಗಳಲ್ಲಿರುವ ಒಟ್ಟು 88 ಗ್ರಾಮ ಪಂಚಾಯಿತಿಗಳ 4,457 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ದಾವಣಗೆರೆ ಒಟ್ಟು 38 ಗ್ರಾಮ ಪಂಚಾಯಿತಿಗಳಿದ್ದು, 02 ಸ್ಥಾನಗಳಲ್ಲಿ ಮಾತ್ರ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ ಮಾಡಿಲ್ಲ. ಇನ್ನು 80 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 499 ಸ್ಥಾನಗಳಿಗೆ ನಿಗದಿ ಪಡಿಸಿದ ದಿನಾಂಕಕ್ಕೆ ಚುನಾವಣೆ ನಡೆಲಿದ್ದು, 1,397 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹೊನ್ನಾಳಿ ತಾಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳಿದ್ದು, 323 ಸ್ಥಾನಗಳಿಗೆ ಒಟ್ಟು 1,121 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 01 ಸ್ಥಾನದಲ್ಲಿ ಮಾತ್ರ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ ಮಾಡಿಲ್ಲ. ಇನ್ನು 31 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 291 ಸ್ಥಾನಗಳಿಗೆ ನಿಗದಿ ಪಡಿಸಿದ ದಿನಾಂಕಕ್ಕೆ ಚುನಾವಣೆ ನಡೆಯಲಿದ್ದು, 810 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜಗಳೂರು ತಾಲೂಕಿನಲ್ಲಿ ಒಟ್ಟು 22 ಗ್ರಾಮ ಪಂಚಾಯಿತಿಗಳಿದ್ದು, 397 ಸ್ಥಾನಗಳಿಗೆ 1,257 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಇನ್ನು 100 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 297 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 774 ಅಭ್ಯರ್ಥಿಗಳು ಕಣದಲ್ಲಿದ್ದಾರೆ.