ಕರ್ನಾಟಕ

karnataka

'ನನ್ನಂತವನು ಬಂದ್ರೂ ಬಗ್ಗಲ್ಲ ಅಂದ್ರೇ, ಮತ್ಯಾರೀಗೆ ಬಗ್ತೀರಾ ಹೇಳ್ರೋ ಮಾರಾಯ..'

ದೇವರಾಜ್ ಅರಸು ಅವರು ಸ್ಲಂನವರಿಗೆ ಸಹಾಯವಾಗಲಿ ಎಂದು ಸ್ಲಮ್ ಬೋರ್ಡ್ ಮಾಡಿ ಹೋದರು. ಆದ್ರೇ, ಈ ಕಪನಿಗೌಡ ಹಾಗೂ ಪದ್ಮನಾಭ್ ಇಬ್ಬರು ಕೂಡ ಆ ಸ್ಲಮ್​​ ಬೋರ್ಡ್‌ನ ತಿಂದು ತಿಂದು ಕೊಬ್ಬಿದ್ದಾರೆ. ಇವರು ಇವಾಗ ನನ್ನಂತವನು ಬಂದ್ರೂ ಬಗ್ಗಲ್ಲ ಅಂದ್ರೇ, ಮತ್ಯಾರೀಗೆ ಬಗ್ತೀರಾ, ಹೇಳ್ರೋ ಮಾರಾಯ..

By

Published : Aug 21, 2021, 4:07 PM IST

Published : Aug 21, 2021, 4:07 PM IST

Updated : Aug 21, 2021, 4:51 PM IST

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ವಿ. ಸೋಮಣ್ಣ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ವಿ. ಸೋಮಣ್ಣ

ದಾವಣಗೆರೆ :ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಸತಿ ಹಾಗೂ ಮೂಲಸೌಲಭ್ಯ ಇಲಾಖೆಯಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಅಧಿಕಾರಿಗಾಳ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು.

ಅಣ್ಣೋ ಇವರಿಗೆ ಇನೋವಾ ಕಾರು, ಐಎಎಸ್ ಅಧಿಕಾರಿಗೆ ನೀಡುವ ಸೌಲತ್ತು ನೀಡ್ತೇವೆ. ಆದ್ರೇ, ನಿಮ್ಮ ಮನೆ ಕಾಯಿಹೋಗ ಕೆಲಸ ಮಾಡ್ರೋ ಅಂದ್ರೇ ನನಗೆ ಬಗ್ಗಲ್ಲ ಎಂದು ಸ್ಲಂ ಬೋರ್ಡ್ ಸಿಇಒ ಕಪನಿಗೌಡ ಎಂಬ ಅಧಿಕಾರಿಯನ್ನ ಸಭೆಯಲ್ಲಿ ಸಚಿವ ವಿ. ಸೋಮಣ್ಣ ತರಾಟೆ ತೆಗೆದುಕೊಂಡರು.

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಚಿವ ವಿ. ಸೋಮಣ್ಣ..

ಕಪನಿಗೌಡ, ಮತ್ತೊಬ್ಬ ಪದ್ಮನಾಭ್ ಎಂಬುವನ್ನೊಬ್ಬ ಇದಾನೆ, ಇವರಿಬ್ಬರು ಮೈಸೂರು ಜಿಲ್ಲೆಯಲ್ಲಿ ದೊಡ್ಡ ತಿಮಿಂಗಿಲಗಳು. ಇವರಿಬ್ಬರು ಇಂಟರ್ ನ್ಯಾಶನಲ್ ತಿಮಿಂಗಿಲಗಳು. ಇವರನ್ನ ನಾವು ಮೈಸೂರಿನಿಂದ ತೆಗೆದು ದಾವಣಗೆರೆಗೆ ವರ್ಗಾವಣೆ ಮಾಡಿದ್ದೆವು ಎಂದರು.

ದೇವರಾಜ್ ಅರಸು ಅವರು ಸ್ಲಂನವರಿಗೆ ಸಹಾಯವಾಗಲಿ ಎಂದು ಸ್ಲಮ್ ಬೋರ್ಡ್ ಮಾಡಿ ಹೋದರು. ಆದ್ರೇ, ಈ ಕಪನಿಗೌಡ ಹಾಗೂ ಪದ್ಮನಾಭ್ ಇಬ್ಬರು ಕೂಡ ಆ ಸ್ಲಮ್​​ ಬೋರ್ಡ್‌ನ ತಿಂದು ತಿಂದು ಕೊಬ್ಬಿದ್ದಾರೆ. ಇವರು ಇವಾಗ ನನ್ನಂತವನು ಬಂದ್ರೂ ಬಗ್ಗಲ್ಲ ಅಂದ್ರೇ, ಮತ್ಯಾರೀಗೆ ಬಗ್ತೀರಾ, ಹೇಳ್ರೋ ಮಾರಾಯ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.

ಇದನ್ನೂ ಓದಿ : ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೋವಿಡ್ ನಿಯಂತ್ರಣಕ್ಕೆ ಕ್ರಮ: ಸಿಎಂ ಭರವಸೆ

ಕೊರೊನಾ ಬಂದು ಎಂಥವರೇ ಹೊರಟು ಹೋದ್ರು, ನಿಮಗೆ ಏನಾ ಆಗಿದೆ ನೀವು ಹಾಗೇ ಉಳಿದಿರಿ. ನಿಮ್ಮ ಆರೋಗ್ಯದ ವಿಚಾರದಲ್ಲಿ ಬುದ್ಧಿವಂತಿಕೆ ಮಾಡಿದ್ದೀರಿ, ಅದ್ರೇ ಬಡವರ ಪರ ಕೆಲಸ ಮಾಡುವುದರಲ್ಲಿ ಬುದ್ಧಿವಂತಿಕೆ ಮಾಡಲ್ಲ ಎಂದರು. ನಿಮ್ಮ ಇನೋವ ಕಾರಿಗೆ ಜಿಪಿಎಸ್ ಹಾಕಿಸ್ತೀನಿ ಎಂದು‌‌ ಗಧರಿಸಿದರು.

Last Updated : Aug 21, 2021, 4:51 PM IST

ABOUT THE AUTHOR

...view details