ಕರ್ನಾಟಕ

karnataka

ETV Bharat / state

ಆರಕ್ಷಕರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ತಲೆ ಎತ್ತಿದೆ ಪೊಲೀಸ್ ಪಬ್ಲಿಕ್ ವಸತಿ ಶಾಲೆ

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ 15 ಕೋಟಿ ವೆಚ್ಚದಲ್ಲಿ ಪೊಲೀಸ್ ಪಬ್ಲಿಕ್ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ.

By

Published : Sep 2, 2021, 9:40 AM IST

Updated : Sep 2, 2021, 1:49 PM IST

police-public-residential-school-started-in-harihara
ಪೊಲೀಸ್ ಪಬ್ಲಿಕ್ ವಸತಿ ಶಾಲೆ

ದಾವಣಗೆರೆ:ಪೊಲೀಸ್ ಇಲಾಖೆಯಲ್ಲಿದ್ದವರು ಒಂದೇ ಊರಿನಲ್ಲಿ ನೆಲೆ‌ ನಿಲ್ಲಲು ಸಾಧ್ಯವಿಲ್ಲ. ಪೊಲೀಸರ ಮಕ್ಕಳ ಶಿಕ್ಷಣಕ್ಕೂ ಕೂಡ ಒಂದೂರು ಬಿಟ್ಟು ಮತ್ತೊಂದೂರಿನ ಶಾಲೆಗಳಿಗೆ ಬದಲಾವಣೆ ಅನಿವಾರ್ಯ. ಇಂತಹ ಪರಿಸ್ಥಿತಿ ಮನಗಂಡ ಇಲಾಖೆ ದಾವಣಗೆರೆಯಲ್ಲಿ ಮಕ್ಕಳಿಗಾಗಿಯೇ ಪೊಲೀಸ್ ಪಬ್ಲಿಕ್ ವಸತಿ ಶಾಲೆ ನಿರ್ಮಿಸಿದ್ದು, ಇಂದು ಕೇಂದ್ರ ಗೃಹ ಸಚಿವ ಅಮಿತ್​​ ಷಾ ಲೋಕಾರ್ಪಣೆ ಮಾಡಲಿದ್ದಾರೆ.

ಕೇಂದ್ರ ಸರ್ಕಾರದ ಅನುದಾನದಲ್ಲಿ ರಾಜ್ಯದ ಪೂರ್ವ ವಲಯದಲ್ಲಿ ಬರುವ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಶಿವಮೊಗ್ಗ ‌ಜಿಲ್ಲೆಗಳಿಗೆ ದಾವಣಗೆರೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಹೊರವಲಯದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ 15 ಕೋಟಿ ವೆಚ್ಚದಲ್ಲಿ ಪೊಲೀಸ್ ಪಬ್ಲಿಕ್ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ.

ಆರಕ್ಷಕರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ತಲೆ ಎತ್ತಿದೆ ಪೊಲೀಸ್ ಪಬ್ಲಿಕ್ ವಸತಿ ಶಾಲೆ

ಇಲ್ಲಿ 200 ವಿದ್ಯಾರ್ಥಿಗಳು 100 ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಶಿಕ್ಷಣವನ್ನು ಅತಿ ಕಡಿಮೆ‌ ದರದಲ್ಲಿ ನೀಡಲು ನಿರ್ಧರಿಸಲಾಗಿದೆ. ಈ ಶಾಲೆಯ ಆಯ್ಕೆ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಲಯದ ಐಜಿಪಿ, ಸೇರಿದಂತೆ ಪೊಲೀಸ್ ಅಧಿಕಾರಿಗಳು ಇರಲಿದ್ದು, ಅವರು ಮಕ್ಕಳನ್ನು ಆಯ್ಕೆ ಮಾಡಲಿದ್ದಾರೆ. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾದ ವಸತಿ ನಿಲಯಗಳಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ಧೇಶ ಹೊಂದಲಾಗಿದೆ.

ಅಲ್ಲದೇ ಕೇವಲ ಪೊಲೀಸರ ಮಕ್ಕಳಿಗೆ ಮಾತ್ರವಲ್ಲ, ಸಾರ್ವಜನಿಕರ ಮಕ್ಕಳಿಗೂ ಪ್ರವೇಶಕ್ಕೆ ಅವಕಾಶವಿದ್ದು 70/30 ಪ್ರಮಾಣದಲ್ಲಿ ದಾಖಲಾತಿ ನಡೆಯಲಿದೆ. ಪೊಲೀಸರ ಮಕ್ಕಳಿಗೆ ಮೊದಲ‌ ಆದ್ಯತೆ ಇದ್ದು, ಉತ್ತಮ‌ ಶಿಕ್ಷಣ ಸಿಗುತ್ತದೆ ಎನ್ನುತ್ತಾರೆ ಎಸ್​​ಪಿ ರಿಷ್ಯಂತ್ ಅವರು.

ಪೊಲೀಸ್ ಪಬ್ಲಿಕ್ ಶಾಲೆ ಕೇಂದ್ರದ ಅನುದಾನದಲ್ಲಿ ನಿರ್ಮಾಣವಾಗಿದ್ದು, ರಾಜ್ಯ ಸರ್ಕಾರದ ಅಧೀನದಲ್ಲಿರಲಿದೆ. ಅಲ್ಲದೇ ಪೊಲೀಸರ ಮಕ್ಕಳಿಗೆ ಉತ್ತಮ ಶಿಕ್ಷಣ ‌ನೀಡುವ ನಿಟ್ಟಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪೊಲೀಸ್ ಪಬ್ಲಿಕ್ ಶಾಲೆಗಳಿವೆ.

ಇದನ್ನೂ ಓದಿ:OTTಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ತಯಾರಿ.. ಒಬ್ಬರೇ 9 ಪಾತ್ರ ನಿರ್ವಹಿಸಿ ಹೊಸ ದಾಖಲೆ

Last Updated : Sep 2, 2021, 1:49 PM IST

ABOUT THE AUTHOR

...view details