ಕರ್ನಾಟಕ

karnataka

ETV Bharat / state

ಎಲ್ಲರೂ ನೋಡು - ನೋಡುತ್ತಿದ್ದಂತೆ ವ್ಯಕ್ತಿ ಬರ್ಬರವಾಗಿ ಕೊಂದ ದುಷ್ಕರ್ಮಿ - ದಾವಣಗೆರೆಯಲ್ಲಿ ವ್ಯಕ್ತಿ ಹತ್ಯೆ

ನೋಡು ನೋಡುತಿದ್ದಂತೆ ಸಾರ್ವಜನಿಕ ಸ್ಥಳದಲ್ಲೇ ಮನಬಂದಂತೆ ಚಾಕುವಿನಿಂದ ಚುಚ್ಚಿ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

Man brutally murder in Davanagere, man killed in Davanagere, Davanagere crime news, ದಾವಣಗೆರೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ, ದಾವಣಗೆರೆಯಲ್ಲಿ ವ್ಯಕ್ತಿ ಹತ್ಯೆ, ದಾವಣಗೆರೆ ಅಪರಾಧ ಸುದ್ದಿ,
ವ್ಯಕ್ತಿಯನ್ನು ಬರ್ಬರ ಕೊಲೆ

By

Published : Jun 21, 2022, 11:20 AM IST

Updated : Jun 21, 2022, 11:58 AM IST

ದಾವಣಗೆರೆ:ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬನಿಗೆ ಮನ ಬಂದಂತೆ‌ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಸರ್ಕಲ್​ನಲ್ಲಿ ನಡೆದಿದೆ. ಸಾರ್ವಜನಿಕರ ಮುಂದೆಯೇ ಈ ಕೊಲೆ ನಡೆದಿದ್ದು, ಸ್ಥಳೀಯರು ಬಿಡಿಸಲು ಯತ್ನಿಸಿದರೂ ಕೂಡ ಮನಬಂದಂತೆ ಚಾಕುವಿನಿಂದ ಹಲ್ಲೆ ಮಾಡಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಲಾಗಿದೆ.

ವ್ಯಕ್ತಿಯನ್ನು ಬರ್ಬರ ಕೊಲೆ

ವೈಯಕ್ತಿಕ ದ್ವೇಷದ ಹಿನ್ನೆಲೆ ನಲ್ಲೂರು ಗ್ರಾಮದ ಜಾಕೀರ್​ ಮೇಲೆ ಸಲೀಂ ಎಂಬಾತ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಎಲ್ಲರೂ ನೋಡುತ್ತಿದ್ದಂತೆ ಚಾಕು ದಾಳಿ ನಡೆಸಿದ್ದ ಸಲೀಂನನ್ನು ಸ್ಥಳೀಯರು ತಡೆಯಲು ಯತ್ನಿಸಿದ್ದಾರೆ. ಆದರೂ ಸಹ ಶಾಂತನಾಗದ ಸಲೀಂ ಜಾಕೀರ್​ ಮೇಲೆ ಚಾಕು ದಾಳಿ ಮುಂದುವರಿಸಿದ್ದನು. ತೀವ್ರ ಗಾಯದಿಂದ ನೆಲಕ್ಕೆ ಬಿದ್ದ ಜಾಕೀರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಜಾಕೀರ್​ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆಗಾಗಿ ರವಾನಿಸಿದರು.

ಓದಿ:ಹಾವೇರಿ: ಕತ್ತು ಸೀಳಿ ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ!

ಈ ಘಟನೆಯ ಸಂಪೂರ್ಣ ದೃಶ್ಯವನ್ನು ವ್ಯಕ್ತಿಯೊಬ್ಬರು ಕಾರಿನಲ್ಲೇ ಕುಳಿತುಕೊಂಡು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 21, 2022, 11:58 AM IST

ABOUT THE AUTHOR

...view details