ಕರ್ನಾಟಕ

karnataka

ETV Bharat / state

RSS ಒಂದೇ ಇದೆ, ಆದ್ರೆ DSS ಹತ್ತಾರಾಗಿವೆ: ಮಾದಾರ ಚನ್ನಯ್ಯ ಸ್ವಾಮೀಜಿ ಬೇಸರ

ಆರ್​ಎಸ್​ಎಸ್ ಆಗಿನಿಂದಲೂ ಒಂದೇ ಇದೆ. ಆದರೆ, ಪರಸ್ಪರ ಕಚ್ಚಾಟದಿಂದ ಡಿಎಸ್​ಎಸ್​ ಹತ್ತಾರು ಸಂಘಟನೆಗಳಾಗಿ ಹೋಗಿದೆ. ಹೀಗಾಗಿ ಎಸ್​​​ಸಿ-​ ಎಸ್​​ಟಿಗಳೇ ಕಚ್ಚಾಡುವುದು ನಿಲ್ಲಬೇಕು, ಎಲ್ಲರೂ ಒಂದಾಗಬೇಕು ಎಂದು ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹೇಳಿದರು.

By

Published : Sep 12, 2021, 4:00 PM IST

madara chennaiah swamiji  speech
ಮಾದಾರ ಚನ್ನಯ್ಯ ಸ್ವಾಮೀಜಿ

ದಾವಣಗೆರೆ: ಆರ್​ಎಸ್​ಎಸ್ ಒಂದೇ ಇದೆ. ಆದರೆ, ಡಿಎಸ್​​ಎಸ್​ ಹತ್ತಾರಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಪೀಠಾಧಿಪತಿ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯ ಜಯನಗರದಲ್ಲಿ ನಡೆದ 'ಸ್ವಾಭಿಮಾನಿ ಎಸ್​​​ಸಿ​​-ಎಸ್​​ಟಿ ಸಂವಾದ ಕಾರ್ಯಕ್ರಮ'ದಲ್ಲಿ ಮಾತನಾಡಿದ ಅವರು, ಈ ಹಿಂದೆ ಬೇರೆ ಪಕ್ಷದಿಂದ ಬಂದ 13 ಶಾಸಕರಿಂದ ಯಡಿಯೂರಪ್ಪ ಸಿಎಂ ಆದ್ರು. ಆದರೆ ಎಸ್​​​ಸಿ​​ ಎಸ್​​ಟಿಯ 52 ಜನ ಶಾಸಕರಿದ್ದರೂ ರಾಜ್ಯದ ಚುಕ್ಕಾಣಿ ಹಿಡಿಯಲು ಆಗಿಲ್ಲ ಎಂಬುದು ದುರಂತ ಎಂದರು.

ಪರಸ್ಪರ ಎಸ್​​​ಸಿ-​ಎಸ್​​ಟಿಗಳೇ ಕಚ್ಚಾಡುವುದು ನಿಲ್ಲಬೇಕು. ರಾಜ್ಯದಲ್ಲಿ 101 ಎಸ್​ಸಿ ಹಾಗೂ 50 ಎಸ್​​ಟಿಗಳಲ್ಲಿ ಉಪಜಾತಿಗಳಿವೆ, ಇವರೆಲ್ಲಾ ಒಂದಾಗಬೇಕು. ಮುಂದಿನ ದಿನಗಳಲ್ಲಿ ಎಸ್​ಸಿ-ಎಸ್​​ಟಿ ಸ್ವಾಮೀಜಿಗಳು ಸೇರಿ ಈ ಎಲ್ಲ ಜಾತಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ನಾವು ಬಲಪಂಥದ ಬಗ್ಗೆ ಮಾತಾಡುತ್ತೇವೆ. ಆದರೆ ಅವರು ಆರಂಭಿಸಿದ ಆರ್​ಎಸ್​ಎಸ್ ಸಂಘಟನೆ ಒಂದೇ ಇದೆ, ಡಿಎಸ್​ಎಸ್ (ದಲಿತ ಸಂಘರ್ಷ ಸಮಿತಿ) ಹತ್ತಾರು ಸಂಘಟನೆಗಳಾಗಿವೆ ಎಂದು ಬೇಸರ ಹೊರಹಾಕಿದರು.

ABOUT THE AUTHOR

...view details