ಕರ್ನಾಟಕ

karnataka

ETV Bharat / state

ಮತ್ತೊಂದು ವಾರ ಲಾಕ್​ಡೌನ್ ಮುಂದುವರೆಸಿದ ಜಿಲ್ಲಾಡಳಿತ, ಸಂಕಷ್ಟದಲ್ಲಿ ಧೋಬಿಗಳು - Dhobi in problem due to lockdown

ದಾವಣಗೆರೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕೂಗಳತೆ ದೂರದಲ್ಲಿರುವ ಕೆನಾಲ್ ಬಳಿ ದಿನ ನಿತ್ಯ ಹೋಟೆಲ್‌ ಹಾಗು ರೆಸ್ಟೋರೆಂಟ್ ಮತ್ತು ಲಾಡ್ಜ್​ಗಳಲ್ಲಿ ಉಪಯೋಗಿಸಿದ ಬಟ್ಟೆಯನ್ನು ಶುದ್ಧಗೊಳಿಸಿ ಅದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದ ಮಡಿವಾಳ ಸಮುದಾಯ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿದೆ.

Lockdown effect on Dhobi
ಸಂಕಷ್ಟದಲ್ಲಿ ಧೋಬಿಗಳು

By

Published : Jun 15, 2021, 7:27 AM IST

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೊಂದು ವಾರ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಇಡೀ ಮಡಿವಾಳ ಸಮುದಾಯ ತೊಂದರೆಗೆ ಸಿಲುಕಿದೆ. ಧೋಬಿ ಘಾಟ್​ಗಳಲ್ಲಿ ಬಟ್ಟೆ ಒಗೆದು ತಮ್ಮ ಜೀವನದ ಬಂಡಿ ನಡೆಸುತ್ತಿದ್ದವರು ಹೈರಾಣಾಗಿದ್ದಾರೆ. ಆದರೆ ಲಾಕ್​ಡೌನ್​ನಿಂದಾಗಿ ಹೋಟೆಲ್, ಲಾಡ್ಜ್​ಗಳು ಬಂದ್ ಇರುವ ಕಾರಣ ಇಡೀ ಸಮುದಾಯ ಆತಂಕದಲ್ಲಿದೆ.

ಸಂಕಷ್ಟದಲ್ಲಿ ಧೋಬಿಗಳು

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಡಿವಾಳ ಜನಾಂಗದವರು ಹೆಚ್ಚಿದ್ದು, ಬಟ್ಟೆ ತೊಳೆಯುವುದೇ ಇವರ ಉದ್ಯಮವಾಗಿದೆ. ಲಾಕ್​ಡೌನ್ ಇರುವ ಕಾರಣ ಲಾಡ್ಜ್, ಹೋಟೆಲ್, ಮುಂತಾದ ಉದ್ಯಮಕ್ಕೆ ಬ್ರೇಕ್ ಬಿದ್ದ ಕಾರಣ ಅಲ್ಲಿನ ಬಟ್ಟೆಗಳನ್ನು ತೊಳೆಯುತ್ತಾ ತಮ್ಮ ಜೀವನದ ಬಂಡಿ ಸಾಗಿಸುತ್ತಿದ್ದ ಇವರಿಗೆ ಕೆಲಸ ಇಲ್ಲದಂತಾಗಿದೆ.

ದಾವಣಗೆರೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕೂಗಳತೆ ದೂರದಲ್ಲಿರುವ ಕೆನಾಲ್ ಬಳಿ ದಿನ ನಿತ್ಯ ಹೋಟೆಲ್‌ ಹಾಗು ರೆಸ್ಟೋರೆಂಟ್ ಮತ್ತು ಲಾಡ್ಜ್​ಗಳಲ್ಲಿ ಉಪಯೋಗಿಸಿದ ಬಟ್ಟೆಯನ್ನು ಶುದ್ಧಗೊಳಿಸಿ ಅದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದರು.

ಆದ್ರೆ ಲಾಕ್​ಡೌನ್​ನಿಂದಾಗಿ ಈಗ ಅವಾಂತರ ಸೃಷ್ಟಿಯಾಗಿದೆ. ಇತ್ತ ಜಿಲ್ಲಾಧಿಕಾರಿ ಮತ್ತೊಂದು ವಾರ ಲಾಕ್​ಡೌನ್ ಘೋಷಣೆ ಮಾಡಿದ್ದು, ಕೆಲ ಸಮಯಕ್ಕೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಲಾಡ್ಜ್, ಹೋಟೆಲ್, ರೆಸ್ಟೋರೆಂಟ್​ಗಳನ್ನು ತೆರೆಯಲು ಅವಕಾಶ ಕಲ್ಪಿಸದೆ ಇರುವುದು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಕಳೆದ ಬಾರಿ ಸರ್ಕಾರ ಮಡಿವಾಳರಿಗೆ 5 ಸಾವಿರ ರೂಪಾಯಿ ನೀಡಿದ್ದು, ಈ ಹಣ ಜೀವನ ನಡೆಸಲು ಸಾಲುವುದಿಲ್ಲ ಎಂದು ಸಂಘದ ಅಧ್ಯಕ್ಷ ಸ್ವಾಮಿ ಅಳಲು ತೋಡಿಕೊಂಡರು. ಹಾಗಾಗಿ ತಕ್ಷಣ ಸರ್ಕಾರದಿಂದ‌ ಧೋಬಿಗಳಿಗೆ ಒಂದೊಳ್ಳೆ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಇದ್ರ ಜೊತೆಗೆ, ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಉಪಯೋಗಿಸಿದ ಕೊರೊನಾ ಬಟ್ಟೆಗಳನ್ನು ಶುದ್ಧಗೊಳಿಸಬೇಕಾಗಿದ್ದು, ಅದನ್ನು ಶುದ್ಧಗೊಳಿಸುವ ವೇಳೆ ರಕ್ಷಣಾ ಸಲಕರಣೆಗಳನ್ನು ನೀಡಿರುವುದಿಲ್ಲ. ಸರ್ಕಾರ ಇತ್ತ ಗಮನಹರಿಸಿ ಮಡಿವಾಳರನ್ನು ಕೂಡ ಕೊರೊನಾ ವಾರಿಯಾರ್ಸ್ ಎಂದು ಘೋಷಣೆ ಮಾಡಬೇಕೆಂಬುದು ಮನವಿ ಮಾಡಿದ್ದಾರೆ.

ABOUT THE AUTHOR

...view details