ಕರ್ನಾಟಕ

karnataka

ETV Bharat / state

ಅನ್ಯ ರಾಜ್ಯ ಪಾಲಾಗುತ್ತಿದ್ದ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಿದ ಬಳ್ಳಾರಿ ಸಿದ್ದಮ್ಮ.. ಇವರ ಬಗ್ಗೆ ನಿಮಗೆಷ್ಟು ಗೊತ್ತು?! - Davangere

ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ದಾವಣಗೆರೆಗೂ ಹಬ್ಬಿತ್ತು. ಏಕೀಕರಣ ಚಳುವಳಿಯಲ್ಲಿ ದಾವಣಗೆರೆಯ ಶಿವರಾಮಸ್ವಾಮಿ, ಇಟಗಿ ವೇದಾಮೂರ್ತಿ, ಬಳ್ಳಾರಿ ಸಿದ್ದಮ್ಮನವರು ಮುಂಚೂಣಿಯಲ್ಲಿದ್ದರು. ಆದ್ರೆ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವಲ್ಲಿ ಬಳ್ಳಾರಿ ಸಿದ್ದಮ್ಮ ಪ್ರಮುಖ ಪಾತ್ರವಹಿಸಿದ್ದರು.

Kannada Rajyotsava
ದಾವಣಗೆರೆಗೂ ಹಬ್ಬಿದ್ದ ಕರ್ನಾಟಕ ಏಕೀಕರಣದ ಚಳುವಳಿಯ ಕಿಚ್ಚು

By ETV Bharat Karnataka Team

Published : Nov 1, 2023, 8:11 AM IST

Updated : Nov 1, 2023, 11:26 AM IST

ಅನ್ಯ ರಾಜ್ಯ ಪಾಲಾಗುತ್ತಿದ್ದ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಿದ ಬಳ್ಳಾರಿ ಸಿದ್ದಮ್ಮ.. ಇವರ ಬಗ್ಗೆ ನಿಮಗೆಷ್ಟು ಗೊತ್ತು?!

ದಾವಣಗೆರೆ:ಕರ್ನಾಟಕ ರಾಜ್ಯವು ನಾಲ್ಕು ಭಾಗವಾಗಿ ಹರಿದು ಹಂಚಿ ಹೋಗಿತ್ತು. ಕರ್ನಾಟಕ ಏಕೀಕರಣವಾದ ನಂತರ ನೂತನ ರಾಜ್ಯ ಉದಾಯಿಸಿತು. ಕರ್ನಾಟಕ ಏಕೀಕರಣವಾಗಿ ನವೆಂಬರ್ 1ಕ್ಕೆ ಐವತ್ತು ವರ್ಷಗಳು ತುಂಬಿದೆ. ಅಂದಿನ ರಾಜ್ಯವನ್ನು ಒಗ್ಗೂಡಿಸುವ ಹೋರಾಟದ ಕಿಚ್ಚು ದಾವಣಗೆರೆ ಜಿಲ್ಲೆಗೂ ಹಬ್ಬಿತ್ತು. ಹೋರಾಟದಲ್ಲಿ ಈ ಭಾಗದ ಘಟಾನುಘಟಿಗಳು ಚಳುವಳಿಗೆ ಧುಮುಕಿ ರಾಜ್ಯದ ಮಧ್ಯೆ ಭಾಗದಲ್ಲಿರುವ ದಾವಣಗೆರೆಯನ್ನೇ ರಾಜಧಾನಿ ಆಗ್ಬೇಕೆಂದು ಪಟ್ಟು ಹಿಡಿದಿದ್ದನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ.

ನಮ್ಮ ರಾಜ್ಯ ಉದಾಯವಾಗಿ 68 ವರ್ಷಗಳೇ ಉರುಳಿದ್ದು, ಕರ್ನಾಟಕ ಏಕೀಕರಣವಾಗಿ ನವೆಂಬರ್ 1ಕ್ಕೆ ಐವತ್ತು ವರ್ಷಗಳು ಪೂರೈಸಿರುವುದು ವಿಶೇಷವಾಗಿದೆ. ಅಂದಿನ ಸಿಎಂ ದೇವರಾಜ್ ಅರಸು ಅವರು 1973 ನವೆಂಬರ್ 1ರಂದು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು. ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆಯನ್ನು ರಾಜಧಾನಿ ಆಗ್ಬೇಕೆಂದು ಕೆಲವರು ಒತ್ತಾಯವಿತ್ತು. ಇನ್ನೂ ಕೆಲವರು ಮೈಸೂರು ಅನ್ನು ರಾಜಧಾನಿ ಮಾಡಬೇಕು ಎನ್ನುವ ಕೂಗು ಕೇಳಿಬಂದಿತ್ತು.

''ಕರ್ನಾಟಕ ಏಕೀಕರಣಕ್ಕಾಗಿ 1922ರಲ್ಲಿ ಮೊಟ್ಟಮೊದಲ ಬಾರಿಗೆ ವೆಂಕಟಸುಬ್ಬಯ್ಯ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಪ್ರಥಮ ಸಮಾವೇಶ ನಡೆದಿತ್ತು. ಇದರೊಂದಿಗೆ ಜಿಲ್ಲೆಯಲ್ಲಿ ಐದಾರು ಏಕೀಕರಣದ ಸಭೆಗಳು ಆಯೋಜಿಸಲಾಗಿತ್ತು. ಏಕೀಕರಣ ಚಳುವಳಿಯಲ್ಲಿ ದಾವಣಗೆರೆಯ ಶಿವರಾಮಸ್ವಾಮಿ, ಇಟಗಿ ವೇದಾಮೂರ್ತಿ, ಬಳ್ಳಾರಿ ಸಿದ್ದಮ್ಮನವರು ಮುಂಚೂಣಿಯಲ್ಲಿದ್ದರು'' ಎಂದು ಎಂದು ಕಸಾಪದ ಜಿಲ್ಲಾಧ್ಯಕ್ಷ ವಾಮದೇವಪ್ಪ ತಿಳಿಸಿದರು.

ಏಕೀಕರಣದ ಹೋರಾಟದಲ್ಲಿ ಬಳ್ಳಾರಿ ಸಿದ್ದಮ್ಮನವರ ವಿಶೇಷ ಪಾತ್ರ:ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಬಳ್ಳಾರಿ ಸಿದ್ದಮ್ಮನವರು ಮಹತ್ವದ ಪಾತ್ರವಹಿಸಿದ್ದರು. ದಾವಣಗೆರೆ ಜಿಲ್ಲೆಯ ಪ್ರಥಮ ಶಾಸಕಿಯಾಗಿ ವಿಧಾನಸಭೆಯನ್ನು ಪ್ರವೇಶ ಮಾಡಿದ್ದ ಬಳ್ಳಾರಿ ಸಿದ್ದಮ್ಮನವರು ಏಕೀಕರಣ ಚಳುವಳಿಯಲ್ಲಿ ಭಾಗಿಯಾದ ಮಹಿಳಾ ಹೋರಾಟಗಾರ್ತಿಯಾಗಿದ್ದರು. ದಾವಣಗೆರೆ ನಗರದ ಕಸ್ತೂರಬಾ ಬಡಾವಣೆಯಲ್ಲಿ ಉದ್ಯಾನವನಕ್ಕೆ ಅವರ ಹೆಸರು ಇಡಲಾಗಿದೆ.

ಬಳ್ಳಾರಿ ಜಿಲ್ಲೆಯನ್ನು ಉಳಿಸಿಕೊಂಡ ಸಿದ್ದಮ್ಮ: ಆಗ ಉತ್ತರ ಕರ್ನಾಟಕ ಭಾಗದಲ್ಲಿ ಏಕೀಕರಣದ ಚಳುವಳಿ ಜೋರಾಗಿತ್ತು. ರಾಜ್ಯ ಪುನರ್ವಿಂಗಡಣಾ ಆಯೋಗದ ಕರಡು ವರದಿಯ ಪ್ರಕಾರ, ಈ ಹಿಂದೆ ಬಳ್ಳಾರಿ ಜಿಲ್ಲೆಯು ಆಂಧ್ರ ಪ್ರದೇಶಕ್ಕೆ ಸೇರುವುದಿತ್ತು. ಇದನ್ನು ಬಲವಾಗಿ ವಿರೋಧಿಸಿದವರಲ್ಲಿ ಬಳ್ಳಾರಿ ಸಿದ್ದಮ್ಮನವರು ಮೊದಲಿಗರು. ಜೊತೆಗೆ ಹಲವು ಮಹಿಳೆಯರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿಗೆ ಸುಮ್ಮನಾಗದ ಸಿದ್ದಮ್ಮನವರು ಚಿತ್ರದುರ್ಗಕ್ಕೆ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರು ಆಗಮಿಸಿದಾಗ, 40ಕ್ಕೂ ಹೆಚ್ಚು ಮಹಿಳೆಯರನ್ನು ಒಗ್ಗೂಡಿಸಿ ಅಧ್ಯಕ್ಷರನ್ನು ಚಿತ್ರದುರ್ಗದಲ್ಲಿ ಭೇಟಿಯಾಗಿದ್ದರು. ಬಳ್ಳಾರಿ ಜಿಲ್ಲೆ ಕರ್ನಾಟಕ ರಾಜ್ಯಕ್ಕೆ ಸೇರಬೇಕು ಎಂದು ಒತ್ತಾಯಿಸಿ ಬಳ್ಳಾರಿಯನ್ನು ಉಳಿಸಿಕೊಂಡ ಕೀರ್ತಿ ಬಳ್ಳಾರಿ ಸಿದ್ದಮ್ಮನವರಿಗೆ ಸುಲ್ಲುತ್ತದೆ.

ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಪ್ರತಿಕ್ರಿಯೆ:ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಪ್ರತಿಕ್ರಿಯಿಸಿ, ''ನಮ್ಮ ರಾಜ್ಯ ಉದಯವಾಗಿ 68 ವರ್ಷಗಳೇ ಉರುಳಿವೆ. ದೇವರಾಜ್ ಅರಸು ಅವರ ಸಂಪುಟವು 1973 ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ಘೋಷಣೆ ಮಾಡಿತ್ತು. ರಾಜ್ಯದ ಮಧ್ಯ ಭಾಗ ದಾವಣಗೆರೆ ಆಗಿರುವ ಕಾರಣ ಈ ಜಿಲ್ಲೆಯನ್ನು ರಾಜಧಾನಿ ಆಗ್ಬೇಕೆಂಬ ಕೂಗು ಇತ್ತು. ಕರ್ನಾಟಕ ಏಕೀಕರಣಕ್ಕಾಗಿ 1922ರಲ್ಲಿ ಮೊಟ್ಟಮೊದಲ ಬಾರಿಗೆ ವೆಂಕಟಸುಬ್ಬಯ್ಯ ಎಂಬುವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದ ಪ್ರಥಮ ಸಮಾವೇಶದಲ್ಲಿ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗದ ನಾಯಕರು ಪಾಲ್ಗೊಂಡಿದ್ದರು. ದಾವಣಗೆರೆಯ ಶಿವರಾಮಸ್ವಾಮಿ, ಇಟಗಿ ವೇದಾಮೂರ್ತಿ, ಬಳ್ಳಾರಿ ಸಿದ್ದಮ್ಮನವರು ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದರು.

ಲೇಖಕ ಭಾಮ ಬಸವರಾಜ್ ಮಾತು:ಲೇಖಕ ಭಾಮ ಬಸವರಾಜ್ ಪ್ರತಿಕ್ರಿಯಿಸಿ, ''ದಾವಣಗೆರೆ ಜಿಲ್ಲೆಯು ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಮುಂಚೂಣಿಯಲ್ಲಿತ್ತು. ಇಟಗಿ ವೇದಾಮೂರ್ತಿ, ಎ. ಶಿವನಂದ್ ಸ್ವಾಮಿ , ಹರಿಹರದ ಚಂದ್ರಶೇಖರ್, ಜಿ.ಎಂ. ಕಲ್ಲಪ್ಪ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು. ಕರ್ನಾಟಕ ಮುಂಬೈ, ಹೈದರಾಬಾದ್ ಕರ್ನಾಟಕ, ಮೈಸೂರು ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಹೀಗೆ ನಾಲ್ಕು ಭಾಗವಾಗಿ ಹರಿದು ಹಂಚಿ ಹೋಗಿತ್ತು. ದಿ.ಎಸ್. ನಿಜಲಿಂಗಪ್ಪನವರು ಭಾಷಾವಾರು ಪ್ರಾಂತ್ಯವಾಗಬೇಕೇಂದು ಹೋರಾಟ ಆರಂಭಿಸಿದಾಗ ಆಂಧ್ರದಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಏಕೀಕರಣ ಚಳುವಳಿಯ ಫಲವಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕ ಒಂದಾಯಿತು. ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡಲು ಮೈಸೂರು ಭಾಗದವರು ವಿರೋಧ ವ್ಯಕ್ತಪಡಿಸಿದ್ದರು'' ಎಂದು ತಿಳಿಸಿದರು.

ಹೀಗೆ ನಾಲ್ಕುಭಾಗವಾಗಿ ಹರಿದು ಹಂಚಿ ಹೋಗಿದ್ದಾ ಕರ್ನಾಟಕ ರಾಜ್ಯವನ್ನು ಕರ್ನಾಟಕ ಏಕೀಕರಣವಾಗಿ ನೂತನ ರಾಜ್ಯ ಉದಾಯಿಸಿತು. ಕರ್ನಾಟಕ ಏಕೀಕರಣವಾಗಿ ನವೆಂಬರ್ 01 ಕ್ಕೆ ಐವತ್ತು ವರ್ಷಗಳು ತುಂಬಿದ್ದು, ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

ಇದನ್ನೂ ಓದಿ:ಕರುನಾಡಿಗೆ 50ರ ಸಂಭ್ರಮ: 21 ಕೋಟಿಯಿಂದ 3.27 ಲಕ್ಷ ಕೋಟಿವರೆಗಿನ ವಿಕಾಸದ ರಾಜ್ಯ ಬಜೆಟ್ ಇತಿಹಾಸ

Last Updated : Nov 1, 2023, 11:26 AM IST

ABOUT THE AUTHOR

...view details