ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಪಾರ್ಕ್ ಜಾಗ ಗುಳುಂ ಆರೋಪ: ಹೈಟೆಕ್ ಬಿಲ್ಡಿಂಗ್ ನಿರ್ಮಿಸಿ ಪೇಚಿಗೆ ಸಿಲುಕಿದ ಮಾಲೀಕ

ದಾವಣಗೆರೆಯ ಬಸವೇಶ್ವರ ಬಡಾವಣೆಯಲ್ಲಿ ಪಾರ್ಕ್​ಗೆ ಸೇರಿದ ಹತ್ತು ಸಾವಿರ ಅಡಿ ಜಾಗದಲ್ಲಿ ಹೈಟೆಕ್ ಬಿಲ್ಡಿಂಗ್ ನಿರ್ಮಿಸಿ ಮಾಲೀಕ ಈಗ ಪೇಚಿಗೆ ಸಿಲುಕಿದ್ದಾನೆ.

By

Published : Mar 18, 2021, 3:51 PM IST

Illegal high-tech building in Davanagere
ದಾವಣಗೆರೆಯಲ್ಲಿ ಅಕ್ರಮವಾಗಿ ಹೈಟೆಕ್ ಬಿಲ್ಡಿಂಗ್ ನಿರ್ಮಾಣ

ದಾವಣಗೆರೆ: ಪಾರ್ಕ್ ಜಾಗದಲ್ಲಿ ಹೈಟೆಕ್ ಬಿಲ್ಡಿಂಗ್ ನಿರ್ಮಾಣ ಮಾಡಿ ಮಾಲೀಕನೋರ್ವ ಈಗ ಕೋರ್ಟ್​ಗೆ ಅಲೆಯುವಂತಾಗಿದೆ. ಪಾರ್ಕ್​ಗೆಂದು ಬಿಟ್ಟಿದ್ದ ಸಾವಿರಾರು ಅಡಿ ಭೂಮಿಯನ್ನು ಅನುಮಾನ ಬಾರದಂತೆ ಗುಳುಂ‌ ಮಾಡಿರುವ ಆರೋಪ ಕೇಳಿ ಬಂದಿದೆ.

ದಾವಣಗೆರೆಯಲ್ಲಿ ಅಕ್ರಮವಾಗಿ ಹೈಟೆಕ್ ಬಿಲ್ಡಿಂಗ್ ನಿರ್ಮಾಣ ಆರೋಪ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮವಾಗಿ ಆಸ್ತಿ ಒತ್ತುವರಿ ಮಾಡಿದವರಿಗೆ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಶಾಕ್​ ನೀಡಿದ್ದಾರೆ. ಪಾರ್ಕ್ ಜಾಗವನ್ನ ಶಶಿಕಲಾ ಸತ್ಯ ನಾರಾಯಣ ವರಮಹಾಲಕ್ಷ್ಮಿ ಎಂಬುವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿಕೊಂಡು ಬೃಹತ್ ಮನೆ ಕಟ್ಟುತ್ತಿದ್ದರು. ಈ ಹಿಂದೆ ಬಸವೇಶ್ವರ ಬಡಾವಣೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ 25 ಸಾವಿರ ಅಡಿ ಜಾಗವನ್ನು ಪಾರ್ಕ್​ಗೆ ಮೀಸಲಿಡಲಾಗಿತ್ತು. ಲೇಔಟ್ ಮಾಲೀಕರು ಎನ್ನಲಾದ ವರಲಕ್ಷ್ಮೀಯಿಂದ ಸೈಟ್ ಖರೀದಿ ಮಾಡಿದ ಶಶಿಕಲಾ ಸತ್ಯನಾರಾಣ ಇಬ್ಬರು ಸೇರಿ ಅಕ್ಕಪಕ್ಕದ ಬರೋಬ್ಬರಿ 10 ಸಾವಿರ ಅಡಿಗೂ ಹೆಚ್ಚು ಜಾಗದಲ್ಲಿ ಎರಡು ಮನೆಗಳನ್ನ ಅಕ್ರಮವಾಗಿ ಕಟ್ಟಿರುವ ಆರೋಪ ಇದೆ.

ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿರುವ ದೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್, ಪಾಲಿಕೆಯಲ್ಲಿ ಎರಡು ಡೋರ್ ನಂಬರ್ ರದ್ದುಗೊಂಡಿದೆ. ಒತ್ತುವರಿ ಜಾಗದ ಕೇಸ್ ಕೋರ್ಟ್​​ನಲ್ಲಿದ್ದು, ಕೋರ್ಟ್ ಆದೇಶದ ನಂತರ ಮನೆಯನ್ನ ಡೆಮಾಲಿಶ್ ಮಾಡಲಾಗುತ್ತೆ ಎಂದು ಒತ್ತುವರಿದಾರರಿಗೆ ಶಾಕ್ ನೀಡಿದ್ದಾರೆ. ದೂಡಾದ ಈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮನೆಯ ಮಾಲೀಕ ಭರತ್, ನಾವು ಟೌನ್ ಪ್ಲ್ಯಾನ್​ನಂತೆ ಎಲ್ಲ ರೀತಿಯ ದಾಖಲೆ ಇಟ್ಟುಕೊಂಡು ಮನೆ ನಿರ್ಮಿಸಿದ್ದೇವೆ ಎಂದಿದ್ದಾರೆ.

ABOUT THE AUTHOR

...view details