ದಾವಣಗೆರೆ: ಮರಕ್ಕೆ ನೇಣು ಬಿಗಿದುಕೊಂಡು ಗೂಡ್ಸ್ ವಾಹನ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಗೂಡ್ಸ್ ವಾಹನ ಚಾಲಕ ಆತ್ಮಹತ್ಯೆ, ಗುರುತು,ಕಾರಣ ನಿಗೂಢ - kannadanews
ಮರಕ್ಕೆ ನೇಣು ಬಿಗಿದುಕೊಂಡು ಗೂಡ್ಸ್ ವಾಹನ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಗೂಡ್ಸ್ ಗಾಡಿ ಚಾಲಕ ಆತ್ಮಹತ್ಯೆ
ಸುಮಾರು 40 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು,ವ್ಯಕ್ತಿ ನಿಖರ ಗುರುತು ಪತ್ತೆಯಾಗಿಲ್ಲ. ಬೊಲೇರೋ ಗೂಡ್ಸ್ ವಾಹನ ನಿಲ್ಲಿಸಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ವಾಹನದಲ್ಲಿ ಚಪ್ಪಲಿ, ಮೊಬೈಲ್ ಹಾಗೂ ವಾಟರ್ ಬಾಟಲ್ ಪತ್ತೆಯಾಗಿದೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.