ಕರ್ನಾಟಕ

karnataka

ETV Bharat / state

ತಾಯಿ ಮೇಲೆ ನಿರಂತರ ಹಲ್ಲೆ: ಪ್ರಶ್ನಿಸಿದ ಮಗನಿಗೆ ವಿಷವುಣಿಸಿ ಹತ್ಯೆಗೈದ ತಂದೆ - ಈಟಿವಿ ಭಾರತ ಕನ್ನಡ

ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ತಂದೆಯನ್ನು ಪ್ರಶ್ನಿಸಿದ ಮಗನನ್ನು ವಿಷವುಣಿಸಿ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಫೋಟೋದಲ್ಲಿರುವ ವ್ಯಕ್ತಿ ಆರೋಪಿ ಸಲೀಂ.

father-killed-son-by-poisoning-in-davanagere
ತಂದೆಯಿಂದ ತಾಯಿ ಮೇಲೆ ಹಲ್ಲೆ : ಪ್ರಶ್ನಿಸಿದ ಮಗನಿಗೆ ವಿಷವುಣಿಸಿ ಕೊಂದ ಪಾಪಿ ತಂದೆ

By

Published : Apr 10, 2023, 5:14 PM IST

ದಾವಣಗೆರೆ: ತಾಯಿಯ ಶೀಲ ಶಂಕಿಸಿ ದಿನನಿತ್ಯ ಜಗಳ ಮಾಡುತ್ತಿದ್ದ ತಂದೆಯನ್ನು ಪ್ರಶ್ನಿಸಿದ ಮಗನಿಗೆ ತಂದೆಯೇ ವಿಷ ಉಣಿಸಿ ಕೊಲೆಗೈದ ಘಟನೆ ದಾವಣಗೆರೆ ತಾಲೂಕಿನ ಗಂಗನಕಟ್ಟೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಮುಬಾರಕ್ (12) ಎಂದು ಗುರುತಿಸಲಾಗಿದೆ. ಆರೋಪಿ ತಂದೆ ಸಲೀಂನನ್ನು (45) ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್​​ 9ರ ಶನಿವಾರ ಸಲೀಂ ಪತ್ನಿಯ ಶೀಲ ಶಂಕಿಸಿ ಕ್ಯಾತೆ ತೆಗೆದು ಹಲ್ಲೆ ನಡೆಸಿದ್ದಾನೆ. ತಾಯಿಯ ಮೇಲೆ ಪ್ರತಿ ದಿನ ಹಲ್ಲೆ ನಡೆಸುತ್ತಿದ್ದುದನ್ನು ಕಂಡು ಬೇಸರಗೊಂಡಿದ್ದ ಮುಬಾರಕ್ ಜಗಳ ತಡೆಯಲು​ ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಸಲೀಂ ಒತ್ತಾಯಪೂರ್ವಕವಾಗಿ ಮುಬಾರಕ್​​ಗೆ ವಿಷ ಕುಡಿಸಿದ್ದಾನೆ. ಅಸ್ವಸ್ಥಗೊಂಡ ಮುಬಾರಕ್​ನನ್ನು ಕರೆದುಕೊಂಡು ಬಂದು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ದುರದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸಲೀಂ ಎರಡು ವಿವಾಹವಾಗಿದ್ದಾನೆ. ಮೊದಲ ಹೆಂಡತಿ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ. ಇದೇ ಕಾರಣಕ್ಕೆ ಆಕೆ ದಾವಣಗೆರೆ ತಾಲೂಕಿನ ಸುಲ್ತಾನಿಪುರವನ್ನು ಬಿಟ್ಟು ಗಂಗನಕಟ್ಟೆ ಗ್ರಾಮದ ಸಂಬಂಧಿಕರ ಮನೆಗೆ ಬಂದು ವಾಸಿಸುತ್ತಿದ್ದಳು. ಇಲ್ಲಿಗೂ ಆಗಮಿಸಿದ್ದ ಸಲೀಂ ಪತ್ನಿ ಮೇಲೆ ಮತ್ತೆ ಹಲ್ಲೆ ನಡೆಸಲು ಮುಂದಾಗಿದ್ದ ಎಂದು ಹೇಳಲಾಗಿದೆ.

ಸಲೀಂ ಪತ್ನಿ ಪ್ರತಿಕ್ರಿಯಿಸಿ, ನನ್ನ ಪತಿ ಸಲೀಂ ದಿನನಿತ್ಯ ನನಗೆ ಹಲ್ಲೆ ಮಾಡುತ್ತಿದ್ದ. ಕಳೆದ ದಿನ ಚಾಕು ತೋರಿಸಿ ಚುಚ್ಚಲು ಯತ್ನಿಸಿದ್ದಾನೆ. ಅಡ್ಡ ಬಂದ ನನ್ನ ಪುತ್ರ ಮುಬಾರಕ್​ಗೆ ಔಷಧಿ ಕುಡಿ ಎಂದು ವಿಷ ಕೊಟ್ಟಿದ್ದಾನೆ. ವಿಷ ಕುಡಿಸಿ ನನ್ನ ಮಗನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದರು. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನೊಂದಿಗೆ ತಾಯಿ ಆತ್ಮಹತ್ಯೆ:ಮಗುವಿಗೆ ನೀಡಲು ಎದೆ ಹಾಲು ಇಲ್ಲವೆಂದು ಮನನೊಂದು ತಾಯಿಯೊಬ್ಬರು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಕುಪ್ಪಗಡ್ಡೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕುಪ್ಪಗಡ್ಡೆ ನಿವಾಸಿ ಶಾಂತಾ (28) ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಘಟನೆ ನಡೆದಿದೆ.

ಇದನ್ನೂ ಓದಿ :ಪ್ರೀತಿ, ಗುಟ್ಟಾಗಿ ಮದುವೆ, ನಿಂದನೆ ಆರೋಪ.. ನವ ವಿವಾಹಿತ ಆತ್ಮಹತ್ಯೆಗೆ ಶರಣು!

ABOUT THE AUTHOR

...view details