ದಾವಣಗೆರೆ: ಲೋಕಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಈ ಹಿನ್ನೆಲೆ ಮೋದಿ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಆದರೆ ಇಲ್ಲೊಬ್ಬರು ವಿಶಿಷ್ಟವಾಗಿ ಮೋದಿ ಪರ ಪ್ರಚಾರ ಮಾಡಿದ್ದಾರೆ.
ಹರ ಹರ ಮೋದಿ... ಮದುವೆ ಮಂಟಪದಲ್ಲೂ ಪಿಎಂ ಪರ ಪ್ರಚಾರ! - undefined
ಟಿಂಕರ್ ಮಂಜಣ್ಣ- ವನಿತಾ ದಂಪತಿಗಳ ಪುತ್ರಿ ಕಾವ್ಯಾ ಮದುವೆ ನಗರದ ಪಿಬಿ ರಸ್ತೆಯಲ್ಲಿ ಇರುವ ರೇಣುಕ ಮಂದಿರದಲ್ಲಿ ನಡೆಯಿತು. ಈ ಮದುವೆಯಲ್ಲಿ ಮೋದಿಗೆ ಓಟ್ ಮಾಡಿ ಎಂದು ಪ್ರಚಾರ ನಡೆಸಲಾಗಿದೆ.
ಮೋದಿ ಪರ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯ ಮಗಳ ಮದುವೆಯಲ್ಲಿ 'ಹರಹರಮೋದಿ ' ಎಂದು ಘೋಷಣೆ ಕೂಗಿ ಪ್ರಚಾರ ನಡೆಸಿದ್ದಾರೆ. ನಗರದ ಕೆಬಿ ಬಡಾವಣೆ ನಿವಾಸಿ ಟಿಂಕರ್ ಮಂಜಣ್ಣ- ವನಿತಾ ದಂಪತಿಗಳ ಪುತ್ರಿ ಕಾವ್ಯಾ ಮದುವೆ ನಗರದ ಪಿಬಿ ರಸ್ತೆಯಲ್ಲಿ ಇರುವ ರೇಣುಕ ಮಂದಿರದಲ್ಲಿ ನಡೆಯಿತು. ಈ ಮದುವೆಯಲ್ಲಿ ಮೋದಿಗೆ ವೋಟ್ ಮಾಡಿ ಎಂದು ಪ್ರಚಾರ ನಡೆಸಲಾಗಿದೆ.
ಲೋಕ ಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನೀಡುವ ಮತವೇ ನಮಗೆ ಕೊಡುವ ಉಡುಗೊರೆ ಎಂದು ಲಗ್ನ ಪತ್ರಿಕೆಯಲ್ಲೂ ಕೂಡ ಮುದ್ರಿಸಲಾಗಿದೆ.