ಕರ್ನಾಟಕ

karnataka

ETV Bharat / state

ಬ್ರಿಟನ್​ನಿಂದ ಬಂದ 20 ಜನರ ಕೊರೊನಾ ವರದಿ ನೆಗೆಟಿವ್​: ಮಹಾಂತೇಶ್ ಬೀಳಗಿ - ಬ್ರಿಟನ್​ನಿಂದ ಬಂದ 20 ಮಂದಿಗೆ ಕೊರೊನಾ ನೆಗೆಟಿವ್

ಕೊವ್ಯಾಕ್ಸಿನ್ ಬಗ್ಗೆ ಸಿಬ್ಬಂದಿಗೆ ತರಬೇತಿ ಕೂಡ‌ ನೀಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ, ಬಳಿಕ ಪೊಲೀಸರಿಗೆ, ಪೌರಕಾರ್ಮಿಕರು, ಯೋಧರಿಗೆ ವ್ಯಾಕ್ಸಿನ್​​ ನೀಡುತ್ತೇವೆ. ಬಳಿಕ 60 ವರ್ಷಗಳ ಮೇಲ್ಪಟ್ಟ ವೃದ್ಧರಿಗೆ ವ್ಯಾಕ್ಸಿನ್​​ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

DC Mahantesh Bilagi
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

By

Published : Jan 5, 2021, 8:09 PM IST

ದಾವಣಗೆರೆ:ಬ್ರಿಟನ್​​ನಿಂದ ದಾವಣಗೆರೆ ಜಿಲ್ಲೆಗೆ ಆಗಮಿಸಿದ 20 ಜನರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ‌ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಡಿಸಿ ಮಹಾಂತೇಶ್ ಬೀಳಗಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಕೊರೊನಾ ವ್ಯಾಕ್ಸಿನ್​ಗಾಗಿ ದಾವಣಗೆರೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ವ್ಯಾಕ್ಸಿನ್​​ಗಾಗಿಯೇ ಕೋಣೆಗಳನ್ನು ಮತಗಟ್ಟೆಗಳ ಮಾದರಿಯಲ್ಲಿ ಸಿದ್ಧ ಪಡಿಸಲಾಗಿದೆ. ವ್ಯಾಕ್ಸಿನ್ ಬಗ್ಗೆ ಸಿಬ್ಬಂದಿಗೆ ತರಬೇತಿ ಕೂಡ‌ ನೀಡಿದ್ದು, ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ, ಬಳಿಕ ಪೊಲೀಸರಿಗೆ, ಪೌರಕಾರ್ಮಿಕರು, ಯೋಧರಿಗೆ ವ್ಯಾಕ್ಸಿನ್​​ ನೀಡುತ್ತೇವೆ. ಬಳಿಕ 60 ವರ್ಷಗಳ ಮೇಲ್ಪಟ್ಟ ವೃದ್ಧರಿಗೆ ವ್ಯಾಕ್ಸಿನ್​​ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಇನ್ನು ವ್ಯಾಕ್ಸಿನ್ ಬಗ್ಗೆ ಹರಿಬಿಡಲಾಗುತ್ತಿರುವ ಸುಳ್ಳು ಸುದ್ದಿಗಳನ್ನು ನಂಬದಂತೆ ಜನರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ABOUT THE AUTHOR

...view details