ದಾವಣಗೆರೆ : ರೈತನ ಜೋಡೆತ್ತುಗಳು ಆಕಸ್ಮಿಕವಾಗಿ ಯೂರಿಯಾ ತಿಂದು ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ.
ಪ್ರೀತಿಯ ಎತ್ತುಗಳ ಪ್ರಾಣ ತೆಗೆಯಿತು ಯೂರಿಯಾ ರೈತ ಅಣ್ಣಪ್ಪ ಮಂಜ - ನಾಗ ಎಂಬ ಜೋಡೆತ್ತುಗಳನ್ನು ಪ್ರೀತಿಯಿಂದ ಸಾಕಿದ್ದರು. ಈ ಎತ್ತುಗಳು ಆಕಸ್ಮಿಕವಾಗಿ ಅಕ್ಕಿ ನುಚ್ಚಿನೊಂದಿಗೆ ಬೆರೆತ ಯೂರಿಯಾ ಗೊಬ್ಬರ ಸೇವಿಸಿ ಸಾವನ್ನಪ್ಪಿವೆ.
ಸುಮಾರು 10 ವರ್ಷಗಳಿಂದ ಈ ಎತ್ತುಗಳು ಅಣ್ಣಪ್ಪನಿಗೆ ಹೆಗಲಾಗಿ ಸಹಕರಿಸಿದ್ದವು. ಆದ್ರೆ ಮೆಕ್ಕೆ ಜೋಳಕ್ಕೆ ಹಾಕಲೆಂದು ಮನೆಯಲ್ಲಿ ಸಂಗ್ರಹಸಿದ್ದ ಯೂರಿಯಾ ಅಕ್ಕಿ ನುಚ್ಚಿನೊಂದಿದೆ ಬೆರೆತಿದೆ. ಇದನ್ನು ಗಮನಿಸದೇ ಎತ್ತುಗಳು ಗೊಬ್ಬರವನ್ನೇ ತಿಂದು ಮೃತಪಟ್ಟಿವೆ
ಘಟನೆಯಿಂದ ರೈತ ಅಣ್ಣಪ್ಪ ಕಂಗಾಲಾಗಿದ್ದರೆ. ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಎತ್ತುಗಳ ಅಂತಿಮ ದರ್ಶನ ಪಡೆದಿದ್ದಾರೆ. ವಿಶೇಷ ಎಂದರೆ ಈ ಎತ್ತುಗಳಿಗೆ ಮನುಷ್ಯರಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ ತನ್ನ ಹೊಲದಲ್ಲೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಅಣ್ಣಪ್ಪ.