ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಲು ಯುವಜನತೆ ನಿರಾಸಕ್ತಿ: ಹೇಗಿದೆ ಪೊಲೀಸ್ ಕಮಿಷನರ್ ವಿನೂತನ ಕಾರ್ಯಕ್ರಮ?

ಪೊಲೀಸ್ ಇಲಾಖೆ ಸೇರುವಂತೆ ಯುವ ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಮಂಗಳೂರಿನಲ್ಲಿ ಒಂದು ತಿಂಗಳ ಉಚಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

By

Published : Aug 8, 2021, 11:41 AM IST

Series Accident in  Bengaluru
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್

ಮಂಗಳೂರು : ದ.ಕ. ಜಿಲ್ಲೆಯ ಅಭ್ಯರ್ಥಿಗಳು ಪೊಲೀಸ್ ಇಲಾಖೆ ಸೇರಲು ನಿರಾಸಕ್ತಿ ತೋರಿಸುತ್ತಿರುವ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ಉಚಿತ ತರಬೇತಿ ಕಾರ್ಯಾಗಾರ ನಡೆಸುವ ಮೂಲಕ ಜಿಲ್ಲೆಯ ಯುವಜನತೆಗೆ ಪೊಲೀಸ್ ಇಲಾಖೆ ಸೇರಲು ಪ್ರೋತ್ಸಾಹ ನೀಡಲಾಗ್ತಿದೆ.

ಪೊಲೀಸ್ ಇಲಾಖೆಗೆ ಇತ್ತೀಚೆಗೆ ಸೇರ್ಪಡೆಗೊಂಡ ನುರಿತ ಪಿಎಸ್ಐ ಹಾಗೂ ಸಿಬ್ಬಂದಿಯ ತಂಡ ಒಂದು ತಿಂಗಳ ಕಾಲ ತರಬೇತಿ ನೀಡಲಿದೆ. ಆಸಕ್ತ ಅಭ್ಯರ್ಥಿಗಳು ಆ.9ರಿಂದ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ನೋಂದಣಿ ಡೆಸ್ಕ್​​ನಲ್ಲಿ‌ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಹೆಸರು‌ ನೋಂದಣಿ ಮಾಡಿಕೊಳ್ಳಬಹುದು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್

ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಅರ್ಹತಾ ಮಾನದಂಡ ಹಾಗೂ ತರಬೇತಿ ನಿಯಮಗಳು ಇಂತಿವೆ.

  • ವಿಳಾಸದ ಬಗ್ಗೆ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು
  • ಪಿಎಸ್ಐ/ಪಿಸಿ ನೇಮಕಾತಿಯ ಇಟಿ/ಪಿಎಸ್​ಟಿನಲ್ಲಿ ಉತ್ತೀರ್ಣಗೊಂಡ ದಾಖಲಾತಿ ಸಲ್ಲಿಸುವುದು ಕಡ್ಡಾಯ
  • ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
  • ದ.ಕ.ಜಿಲ್ಲೆಯವರಿಗೆ ಮೊದಲ ಆದ್ಯತೆ. ಬಳಿಕ ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯವರನ್ನು ಪರಿಗಣಿಸಲಾಗುತ್ತದೆ
  • 30 ದಿನ ಕಾರ್ಯಾಗಾರ ನಡೆಯಲಿದ್ದು, ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ‌
  • ಮೊದಲ ಹಂತದಲ್ಲಿ 100 ಅಭ್ಯರ್ಥಿಗಳಿಗೆ ಅವಕಾಶ. ಊಟ, ವಸತಿ ಸೌಲಭ್ಯ ಉಚಿತ, ತರಬೇತಿ ಸಮಯದಲ್ಲಿ ಕಡ್ಡಾಯ ನಿಗದಿತ ಸ್ಥಳದಲ್ಲಿ ವಾಸ್ತವ್ಯವಿರಬೇಕು
  • ಪ್ರತಿದಿನ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ತರಬೇತಿ, ತರಗತಿ, ಓದುವಿಕೆ ಇರಲಿದ್ದು, ಅಭ್ಯರ್ಥಿಗಳು ಕಡ್ಡಾಯ ಹಾಜರಿರಬೇಕು. ಅವಶ್ಯಕ ಸಾಮಗ್ರಿಗಳನ್ನು ಅಭ್ಯರ್ಥಿಗಳೇ ತರಬೇಕು
  • ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ಅಲೋಶಿಯಸ್ ಕಾಲೇಜಿನಲ್ಲಿ ವಾಸ್ತವ್ಯ, ತರಗತಿ ಹಾಗೂ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಿಸಲಾಗುತ್ತದೆ.

ಆಸಕ್ತರು ಮಂಗಳೂರು ಕಮಿಷನರೇಟ್ ಘಟಕದ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details