ಕರ್ನಾಟಕ

karnataka

ಸಮುದ್ರದಲ್ಲಿ ಸತತ 30 ಗಂಟೆ ಏಕಾಂಗಿ ಹೋರಾಟ... ನಾಪತ್ತೆಯಾಗಿದ್ದ ಉಳ್ಳಾಲದ ಮೀನುಗಾರ ಮಲ್ಪೆಯಲ್ಲಿ ಪತ್ತೆ

By

Published : Sep 8, 2020, 4:41 PM IST

Updated : Sep 8, 2020, 10:54 PM IST

ಮೀನುಗಾರರು ರಾತ್ರಿಯವರೆಗೆ ಬಲೆಯನ್ನು ಬಿಡಿಸುವ ಕಾಯಕದಲ್ಲಿ ತೊಡಗಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಗಾಳಿ ಮಳೆ ಹೆಚ್ಚಾಗಿ ಬೋಟ್​ಗೆ ಕಟ್ಟಿದ್ದ ಪಾತಿ ಹಗ್ಗ ತುಂಡಾಗಿ ಸಮುದ್ರದ ಪಾಲಾಯಿತು. ಸುನಿಲ್‌ ಅವರು ಬಲೆ ಎಳೆಯಲೆಂದು ಪಾತಿಯಲ್ಲಿ ಕುಳಿತಿದ್ದರು. ಬೋಟ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಸುನಿಲ್​ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸುನಿಲ್ ಸತತ 30 ಗಂಟೆಗಳ ನಂತರ ಸಮುದ್ರದಲ್ಲಿ ಏಕಾಂಗಿ ಹೋರಾಟ ನಡೆಸಿ ಮಲ್ಪೆಗೆ ಬಂದು ಸೇರಿದ್ದಾರೆ.

Ulala: A missing fisherman found in Malpe
ನಾಪತ್ತೆಯಾಗಿದ್ದ ಮೀನುಗಾರ ಮಲ್ಪೆಯಲ್ಲಿ ಪತ್ತೆ

ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್‌ ಬೋಟ್​ನಿಂದ ರವಿವಾರ ತಡರಾತ್ರಿ ಬಿರುಗಾಳಿಗೆ ಸಿಲುಕಿದ್ದು, ಬೋಟ್‌ನ ಡಿಂಗಿ (ಪಾತಿ)ಯ ಜೊತೆಗೆ ನಾಪತ್ತೆಯಾಗಿದ್ದ ಮೀನುಗಾರ 30 ಗಂಟೆಗಳ ನಂತರ ಇಂದು ಮಲ್ಪೆಯಲ್ಲಿ ಪತ್ತೆಯಾಗಿದ್ದಾರೆ.

ನಾಪತ್ತೆಯಾಗಿದ್ದ ಮೀನುಗಾರ ಮಲ್ಪೆಯಲ್ಲಿ ಪತ್ತೆ

ರವಿವಾರ ರಾತ್ರಿ ನಾಪತ್ತೆಯಾಗಿದ್ದ ಉಳ್ಳಾಲ ಹೊಗೆ ನಿವಾಸಿ ಆರ್ಥರ್‌ ಸುನಿಲ್‌ ಕುವೆಲ್ಲೋ (45) ಇಂದು ಮಲ್ಪೆ ಬಳಿ ಪತ್ತೆಯಾಗಿದ್ದಾರೆ. ಪರ್ಸಿನ್‌ ಬೋಟ್‌ನಲ್ಲಿ 29 ಮಂದಿ ಮೀನುಗಾರರು ಮೀನು ಹಿಡಿಯಲು ತೆರಳಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಬೋಟ್‌ನ ಬೆಲ್ಟ್ ತುಂಡಾಗಿದ್ದು, ಈ ಸಂದರ್ಭದಲ್ಲಿ ಸಮುದ್ರಕ್ಕೆ ಬೀಸಿದ್ದ ಬಲೆ ಸಂಪೂರ್ಣ ಮುದ್ದೆಯಾಗಿತ್ತು. ಮೀನುಗಾರರು ರಾತ್ರಿಯವರೆಗೆ ಬಲೆಯನ್ನು ಬಿಡಿಸುವ ಕಾಯಕದಲ್ಲಿ ತೊಡಗಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಗಾಳಿ ಮಳೆ ಹೆಚ್ಚಾಗಿ ಬೋಟ್​ಗೆ ಕಟ್ಟಿದ್ದ ಪಾತಿ ಹಗ್ಗ ತುಂಡಾಗಿ ಸಮುದ್ರದ ಪಾಲಾಗಿತ್ತು.

ನಾಪತ್ತೆಯಾಗಿದ್ದ ಉಳ್ಳಾಲದ ಮೀನುಗಾರ ಮಲ್ಪೆಯಲ್ಲಿ ಪತ್ತೆ

ಸುನಿಲ್‌ ಅವರು ಬಲೆ ಎಳೆಯಲೆಂದು ಪಾತಿಯಲ್ಲಿ ಕುಳಿತಿದ್ದರು. ಬೋಟ್‌ನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಸುನಿಲ್​ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸೋಮವಾರ ಹಗಲಿಡೀ ಸಮುದ್ರದಲ್ಲಿ ಹುಡುಕಾಡಿದ್ದು ರಾತ್ರಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಪರ್ಸಿನ್ ಬೋಟ್​ನಿಂದ ತಪ್ಪಿಸಿಕೊಂಡಿದ್ದ ಸುನಿಲ್ ಸತತ 30 ಗಂಟೆಗಳ ನಂತರ ಸಮುದ್ರದಲ್ಲಿ ಏಕಾಂಗಿ ಹೋರಾಟ ನಡೆಸಿ ಮಲ್ಪೆಗೆ ಬಂದು ಸೇರಿದ್ದಾರೆ. ಅಲ್ಲಿ ಅವರನ್ನು ರಕ್ಷಿಸಲಾಗಿದೆ.

Last Updated : Sep 8, 2020, 10:54 PM IST

ABOUT THE AUTHOR

...view details