ಮಂಗಳೂರು:ಕೊರೊನಾ ನಿಯಮಾವಳಿಯಂತೆ ಗರ್ಭಿಣಿಯರಿಗೆ ಲಸಿಕೆ ನೀಡಲಾಗುತ್ತಿಲ್ಲ. ಆದ್ದರಿಂದ ನಿನ್ನೆ ಮಂಗಳೂರಿನಲ್ಲಿ ಲಸಿಕೆ ಪಡೆಯಲು ಬಂದಿದ್ದ ಗರ್ಭಿಣಿ ದಾದಿಯನ್ನು ಹಿಂತಿರುಗಿ ಕಳುಹಿಸಲಾಯಿತು.
ಕೊರೊನಾ ಲಸಿಕೆ ಪಡೆಯಲು ಬಂದಿದ್ದ ದಾದಿಗೆ ನಿರಾಸೆ.. ನಿಯಮ ಪ್ರಕಾರ ಗರ್ಭಿಣಿಯರು ಲಸಿಕೆ ಪಡೆಯುವಂತಿಲ್ಲ..! - Wenlock Hospital in Mangalore
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಕೊರೊನಾ ಲಸಿಕೆ ಪಡೆಯಲು ಆಗಮಿಸಿದ್ದ ದಾದಿಯ ಮನವೊಲಿಕೆ ಮಾಡಿ ಅವರನ್ನು ವಾಪಸ್ ಕಳುಹಿಸಲಾಯಿತು.
ಕೊರೊನಾ ಲಸಿಕೆ ಪಡೆಯಲು ಬಂದಿದ್ದ ದಾದಿಗೆ ನಿರಾಸೆ... ನಿಯಮ ಪ್ರಕಾರ ಗರ್ಭಿಣಿಯರು ಲಸಿಕೆ ಪಡೆಯುವಂತಿಲ್ಲ..!
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಫಲಾನುಭವಿ ನರ್ಸ್ ಒಬ್ಬರು ಕೊರೊನಾ ಲಸಿಕೆ ಪಡೆಯಲು ಆಗಮಿಸಿದ್ದರು. ಅದಾಗಲೇ ಅವರು ಲಸಿಕೆ ಪಡೆಯಲು ಕೋವಿಡ್ ಆ್ಯಪ್ ಮೂಲಕ ನೋಂದಣಿ ಕೂಡ ಮಾಡಿಕೊಂಡಿದ್ದರು. ಆದರೆ, ಕೊರೊನಾ ಲಸಿಕಾ ನಿಯಮಾವಳಿ ಪ್ರಕಾರ ಗರ್ಭಿಣಿಯರು ಲಸಿಕೆ ಪಡೆಯುವಂತಿಲ್ಲ. ಆದ್ದರಿಂದ ನೋಡಲ್ ಅಧಿಕಾರಿ ಡಾ. ರಾಜೇಶ್ ಗರ್ಭಿಣಿಯ ಮನವೊಲಿಕೆ ಮಾಡಿ ಹಿಂದಕ್ಕೆ ಕಳುಹಿಸಿದ್ದಾರೆ.