ದಕ್ಷಿಣ ಕನ್ನಡ: ಕೊರೊನಾ ತಡೆಗೆ ಜಿಲ್ಲಾದ್ಯಂತ ನಿಷೇಧ ಹೇರಲಾಗಿದ್ದು, ಅವಶ್ಯಕ ವಸ್ತುಗಳನ್ನು ಹೊರತು ಪಡಿಸಿ, ಉಳಿದ ವ್ಯಾಪಾರ ವಹಿವಾಟು ಬಂದ್ ಮಾಡುವಂತೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಬಸ್ ಸೇವೆಗಳು ಬೆಳಗ್ಗೆಯಿಂದಲೇ ಸ್ತಬ್ಧವಾಗಿದ್ದವು. ಇನ್ನೊಂದು ಕಡೆ ಅನಾವಶ್ಯಕವಾಗಿ ಹೊರಗಡೆ ಸುತ್ತಾಡದಂತೆ ಸಾರ್ವಜನಿಕರಿಗೆ ಪೊಲೀಸ್ ಸಿಬ್ಬಂದಿ ಕರೆ ನೀಡಿ, ಭಿತ್ತಿಪತ್ರ ಹಂಚಲಾಗುತ್ತಿತ್ತು.
ಅನಗತ್ಯ ಸುತ್ತಾಟಕ್ಕೆ ಬ್ರೇಕ್: ಅವಶ್ಯಕ ವಸ್ತು ಮಾರಾಟಕ್ಕೆ ಅನುಮತಿ
ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸರ್ಕಾರದ ಸೂಚನೆಗಳನ್ನು ಪಾಲಿಸುವಂತೆ ಹಾಗೂ ಅನಗತ್ಯ ಸುತ್ತಾಟಗಳನ್ನು ನಿಲ್ಲಿಸುವಂತೆ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ನೀಡಿದರು.
ಅವಶ್ಯಕ ವಸ್ತು ಮಾರಾಟಕ್ಕೆ ಅನುಮತಿ
ಜನತಾ ಕರ್ಫ್ಯೂ ಹಿನ್ನೆಲೆ ನಿನ್ನೆ ಇಡೀ ದಿನ ಮನೆಯಲ್ಲಿದ್ದ ಜನರು ಇಂದು ಬೀದಿಗೆ ಇಳಿದಿದ್ದರು. ಜಿಲ್ಲಾಡಳಿತ ಜನರ ನಿಯಂತ್ರಣಕ್ಕೆ ಮುಂದಾಗಿದ್ದು, ಪೊಲೀಸ್ ಇಲಾಖೆಯ ಮೂಲಕ ಈ ಕಾರ್ಯಾಚರಣೆ ಆರಂಭಗೊಂಡಿದೆ.