ಕರ್ನಾಟಕ

karnataka

ಇದು ಪೊಲೀಸ್ ರಾಜ್ಯನಾ? ಅಥವಾ ಪ್ರಜಾಪ್ರಭುತ್ವ ರಾಜ್ಯವೇ ?.. ಸಿದ್ದರಾಮಯ್ಯ ಪ್ರಶ್ನೆ

By

Published : Dec 23, 2019, 6:50 PM IST

ಮಂಗಳೂರಿನಲ್ಲಿ ನಡೆದ ಗೋಲಿಬಾರ್​​ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

pressmeet
ಸಿದ್ದರಾಮಯ್ಯ ಸುದ್ದಿಗೋಷ್ಟಿ

ಮಂಗಳೂರು: ಮಂಗಳೂರಿನಲ್ಲಿ ಉದ್ದೇಶಪೂರ್ವಕವಾಗಿ ಗೋಲಿಬಾರ್ ಮಾಡಿದ್ದಾರೆ. ಸಿದ್ದರಾಮಯ್ಯ ಆರೋಪ ನ್ಯಾಯಾಂಗ ತನಿಖೆಗೆ ಒಪ್ಪಿಸದಿದ್ದರೆ ವಿಧಾನಸಭಾ ಅಧಿವೇಶನವನ್ನು ನಡೆಯಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಗೋಲಿಬಾರ್​​ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ. ಹೀಗಾಗಿ ಇದರ ಸಂಪೂರ್ಣ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಲು ಆದೇಶ ಮಾಡಿರುವುದು ಸರಿಯಲ್ಲ. ಪೊಲೀಸರೇ ಫೈರಿಂಗ್ ಮಾಡಿರುವ ಪ್ರಕರಣವನ್ನು ಸಿಐಡಿಯಿಂದ ಮಾಡಿಸುತ್ತಿರುವುದು ಸರಕಾರದ ಕಣ್ಣೊರೆಸುವ ತಂತ್ರ ಎಂದು ಟೀಕಿಸಿದ್ದಾರೆ.

ಫೈರಿಂಗ್ ಆದ ಜಾಗವನ್ನು ಗಮನಿಸಿದರೆ ಅದು ಪೊಲೀಸ್ ಠಾಣೆಯಿಂದ ಒಂದು ಕಿ.ಮೀ ದೂರದಲ್ಲಿದೆ. ಕಟ್ಟುಕಥೆ ಕಟ್ಡಿದ್ದಾರೆ . ಮಂಗಳೂರಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜನರ ಹಕ್ಕು ಹತ್ತಿಕ್ಕಬೇಕು ಎಂದು ಉದ್ದೇಶಪೂರ್ವಕವಾಗಿ ಗೋಲಿಬಾರ್ ಮಾಡಲಾಗಿದೆ ಎಂದ್ರು. ಇದನ್ನು ಪರಿಶೀಲನೆ ನಡೆಸಲು ವಿಪಕ್ಷ ನಾಯಕನಾಗಿ ನನಗೆ ಸರಕಾರ ಅವಕಾಶ ನಿರಾಕರಿಸಿತ್ತು. ಡಿಸೆಂಬರ್ 21 ರಂದು ಮುಖ್ಯಮಂತ್ರಿ ಗೃಹಮಂತ್ರಿ ಉಪಮುಖ್ಯಮಂತ್ರಿಗಳಿಗೆ ಭೇಟಿಗೆ ಅವಕಾಶ ನೀಡಿದ್ದಾರೆ. ಕರ್ಫ್ಯೂ ಸಂದರ್ಭದಲ್ಲಿ ಜಿಲ್ಲೆಯ ಪ್ರತಿನಿಧಿ ಆಗಿರದ ಶೋಭಾ ಕರಂದ್ಲಾಜೆ ಅವರಿಗೂ ಭೇಟಿಗೆ ಅವಕಾಶ ನೀಡಿದ್ದಾರೆ. ಅವರು ಇಲ್ಲಿ ಬಂದು ಕಾಂಗ್ರೆಸ್ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಪ್ರತಿಪಕ್ಷದ ನಾಯಕನಾಗಿ ನನಗೆ ಬರಲು ಅವಕಾಶ ನೀಡಿಲ್ಲ .ಅದು ಸಿಎಂ ಸೂಚನೆಯಂತೆ ಆಗಿದೆ. ಈ ರೀತಿ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಟೀಕಿಸಿದರು.

ಸಿದ್ದರಾಮಯ್ಯ ಸುದ್ದಿಗೋಷ್ಟಿ

ಮಂಗಳೂರು ಹಿಂಸಾಚಾರ ಪ್ರಕರಣದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ತೋರಿಸುತ್ತದೆ . ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ಸರಕಾರ ವಿಫಲವಾಗಿದೆ. ನನ್ನ ಪ್ರಕಾರ ರಾಜ್ಯದಲ್ಲಿ 144 ಸೆಕ್ಷನ್ ಅಗತ್ಯವಿರಲಿಲ್ಲ. ಮಂಗಳೂರು ಹಿಂಸಾಚಾರದಲ್ಲಿ ಕೇರಳದಿಂದ ಬಂದವರು ದುಷ್ಕೃತ್ಯ ಎಸಗಿದ್ದಾರೆ ಎಂದು ಆಪಾದಿಸಲಾಗಿದೆ. ಇದು ಸುಳ್ಳು ಎಂದವರು ಹೇಳಿದರು. ಅಷ್ಟು ಗುಂಡು ಹೊಡೆದರೂ ಯಾರೂ ಸತ್ತಿಲ್ಲ ಎಂದು ಇನ್ಸ್​​ಪೆಕ್ಟರ್​​ ಒಬ್ಬರು ಮಾತನಾಡಿರುವ ಧ್ವನಿ ಕೇಳಿದರೆ, ಇವರಿಗೆ ಸಾಯಿಸುವ ಉದ್ದೇಶ ಇತ್ತು ಅಂತ ಮೇಲ್ನೋಟಕ್ಕೆ ಅನಿಸುತ್ತದೆ. ಇನ್ಸ್​​ಪೆಕ್ಟರ್​​ ಅಮಾನತು ಮಾಡಬೇಕು ಎಂದು ಅವರು ಆಗ್ರಹಿಸಿದರು. ಆಸ್ಪತ್ರೆಯ ಐಸಿಯುಗೆ ನುಗ್ಗಿ ಹೊಡೆದಿದ್ದಾರೆ .ಏಕಾಏಕಿ ಗೋಲಿಬಾರ್ ಮಾಡಿದ್ದಾರೆ .ಇದು ಪೊಲೀಸ್ ರಾಜ್ಯನಾ? ಅಥವಾ ಪ್ರಜಾಪ್ರಭುತ್ವ ರಾಜ್ಯವೇ ? ಇಲ್ಲಿ ನಾಗರಿಕ ಸರಕಾರ ಇದೆಯ ಎಂದು ಪ್ರಶ್ನಿಸಿದರು.

ಪೊಲೀಸರು ಹಿಂಸೆಯನ್ನು ಶುರುಮಾಡಿದ್ದಾರೆ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇದಕ್ಕೆ ನೇರ ಜವಾಬ್ದಾರಿ ಹೊರಬೇಕು. ಈ ಬಗ್ಗೆ ಕೂಲಂಕಷ ತನಿಖೆಯಾಗಬೇಕು. ನ್ಯಾಯಾಂಗ ತನಿಖೆಯಿಂದ ಸತ್ಯ ಗೊತ್ತಾಗಲು ಸಾಧ್ಯ ಎಂದರು. ಇನ್ನು ಸುರೇಶ್ ಅಂಗಡಿ ಒಂದು ಸೆಕೆಂಡು ಮಂತ್ರಿಯಾಗಿರಲು ನಾಲಾಯಕ್ಕು. ಅವರ ಹೇಳಿಕೆ ಮೇಲೆ ಅವರ ಮೇಲೆ ಪ್ರಕರಣ ದಾಖಲಿಸಬೇಕು. ಅವರು ಮಂತ್ರಿಯಾಗಿ ಈ ರೀತಿ ಹೇಳಿಕೆಯನ್ನು ಕೊಡಬಾರದು. ಆದರೆ, ಖಾದರ್ ಅವರು ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಖಾದರ್ ಅವರ ಮೇಲೆ ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತ ಎಂದು ಹರಿಹಾಯ್ದರು. ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವುದಕ್ಕೆ ಹಲವರಲ್ಲಿ ಅಸಮಾಧಾನ ಇದೆ. ಅವರನ್ನು ಕೆಳಗಿಳಿಸಲು ಈ ರೀತಿಯ ಘಟನೆಗಳು ನಡೆದಿರಲೂಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ABOUT THE AUTHOR

...view details