ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರ ಊರು ಸೇರುವ ಕನಸಿಗೆ ರೆಡ್ - ಜೋನ್​​​ ತಡೆ...! - corona virus update

ಪುತ್ತೂರಿನ ಬೀರಮಲೆ ಹಾಗೂ ಕೊಂಬೆಟ್ಟು ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರಸ್ತುತ 66 ಮಂದಿ ಕಾರ್ಮಿಕರಿಗೆ ಆಶ್ರಯ ನೀಡಲಾಗಿದೆ. ಕಳೆದ ಎರಡು ದಿನಗಳಿಂದ 21 ಮಂದಿ ಕಾರ್ಮಿಕರನ್ನು ಪುತ್ತೂರು ನಗರಸಭೆಯ ಸಮುದಾಯ ಭವನದಲ್ಲಿ ಉಳಿಸಲಾಗಿತ್ತು. ಇದೀಗ ಈ ಕಾರ್ಮಿಕರನ್ನು ಕೊಂಬೆಟ್ಟು ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

Redzone prevents migrant workers from dreaming
ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು

By

Published : Apr 28, 2020, 6:01 PM IST

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳ ವಲಸೆ ಕಾರ್ಮಿಕರು ದುಡಿಯುತ್ತಿದ್ದು, ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದೀಗ ಕೆಲಸ ಕಳೆದುಕೊಂಡಿದ್ದಾರೆ. ಸರ್ಕಾರದ ಆದೇಶದಂತೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಸರ್ಕಾರಿ ಬಸ್​ಗಳ ಮೂಲಕ ಕಳುಹಿಸಿಕೊಡಲಾಗಿದೆ. ಉಳಿದ ಕಾರ್ಮಿಕರು ಊರಿಗೆ ಹೋಗಲು ಮುಂದಾಗಿದ್ದಾರೆ. ಆದರೆ, ಇದೀಗ ರಾಜ್ಯದ ಕೆಲವು ಜಿಲ್ಲೆಗಳು `ರೆಡ್‌ ಜೋನ್' ಇರುವ ಕಾರಣ ಉಳಿದ ಕಾರ್ಮಿಕರನ್ನು ಕಳುಹಿಸುವ ಪ್ರಕ್ರಿಯೆಗೆ ತಡೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪುತ್ತೂರು ತಾಲೂಕಿನಿಂದ ಈಗಾಗಲೇ ಸುಮಾರು 400 ಮಂದಿ ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿದೆ. ಇನ್ನು ಸುಮಾರು 400 ಕಾರ್ಮಿಕರು ಊರಿಗೆ ತೆರಳಲು ತಯಾರಾಗಿದ್ದಾರೆ. ಈ ಪೈಕಿ ಸುಮಾರು 66 ಕಾರ್ಮಿಕರನ್ನು ಬೀರಮಲೆ ಹಾಗೂ ಕೊಂಬೆಟ್ಟು ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯಕ್ಕೆ ತಾಲೂಕು ಆಡಳಿತ ವ್ಯವಸ್ಥೆ ಮಾಡಿದೆ. ಆದರೆ, ಈ ಕಾರ್ಮಿಕರು ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದು, ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯದ ಗದಗ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ತುಮಕೂರು, ಕೊಪ್ಪಳ ಮತ್ತಿತರ ಜಿಲ್ಲೆಗಳಿಂದ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಕಾರ್ಮಿಕರನ್ನು ಕಳುಹಿಸುವ ವ್ಯವಸ್ಥೆಯನ್ನೂ ಯಶಸ್ವಿಯಾಗಿ ಮಾಡಲಾಗಿತ್ತು.

ಇದರಿಂದ ಪ್ರೇರಿತರಾದ ಇನ್ನಷ್ಟು ಕಾರ್ಮಿಕರು ಸ್ವಂತ ಊರಿಗೆ ಹೋಗಲು ಪುತ್ತೂರು ಮಿನಿವಿಧಾನಸೌಧಕ್ಕೆ ಬಂದು ಅಧಿಕಾರಿಗಳಲ್ಲಿ ಬೇಡಿಕೆ ಇಡುತ್ತಿದ್ದಾರೆ. ಮಾಲೀಕರು ಹಾಗೂ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರನ್ನು ಬೇಕಾಬಿಟ್ಟಿಯಾಗಿ ತಂದು ಬಿಡುತ್ತಿದ್ದಾರೆ. ಇನ್ನು ಕೆಲವು ಮಾಲೀಕರು ನೀವೇ ಹೋಗಿ ಎಂದು ಕಾರ್ಮಿಕರನ್ನು ಅಟ್ಟಿಬಿಡುತ್ತಿದ್ದಾರೆ. ಈ ಕಾರ್ಮಿಕರನ್ನು ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಸಾಕುವ ಜವಾಬ್ದಾರಿಯನ್ನು ಇದೀಗ ಅಧಿಕಾರಿಗಳು ಹೊತ್ತುಕೊಂಡಿದ್ದಾರೆ.

ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು

ಇಲ್ಲಿ ಹೊಸ ಸೋಂಕು ಪ್ರಕರಣಗಳು ಮತ್ತೆ ಮತ್ತೆ ದಾಖಲಾಗುತ್ತಿವೆ. ಬಂಟ್ವಾಳ, ಉಪ್ಪಿನಂಗಡಿ, ಮಂಗಳೂರಿನಲ್ಲಿ ಈ ಹೊಸ ಪ್ರಕರಣಗಳು ದೃಢಪಟ್ಟ ಕಾರಣ ಜಿಲ್ಲೆಯ ರೆಡ್ ಜೋನ್​' ಬದಲಾವಣೆಗೊಂಡು ಗ್ರೀನ್ ಜೋನ್​​​​​​​ಗೆ ಬರುವುದು ಸುಲಭ ಸಾಧ್ಯವಲ್ಲ. ಹಾಗಾಗಿ ವಲಸೆ ಕಾರ್ಮಿಕರ ಸ್ವಂತ ಊರಿಗೆ ಹೋಗುವ ಕನಸಿಗೂ ರೆಡ್‌ಜೋನ್​ ದೊಡ್ಡ ತಡೆಯಾಗಿ ಮಾರ್ಪಟ್ಟಿದೆ.

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಬಂದು ಈ ಕಾರ್ಮಿಕರ ಬೇಕು-ಬೇಡಗಳನ್ನು ಗಮನಿಸಿಕೊಳ್ಳುತ್ತಿರುವ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅವರು ಕಾರ್ಮಿಕರ ಪಾಲಿಗೆ ಅನ್ನದಾತನಾಗಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಮಾಸ್ಕ್ ಕೊಟ್ಟು ನಾವು ಹೇಗೆ ಇರಬೇಕು ಎಂಬ ಮಾಹಿತಿ ದಿನಾ ನೀಡುತ್ತಿದ್ದಾರೆ. ನಾವು ತಂಪು ಹೊತ್ತಿನಲ್ಲಿ ಇವರನ್ನು ನೆನಪಿಸಿಕೊಳ್ಳಬೇಕು ಎಂದು ಗದಗದ ಸಣ್ಣ ಮೈಲಾರಪ್ಪ ಅಭಿಮಾನದಿಂದ ಹೇಳುತ್ತಾರೆ.

ABOUT THE AUTHOR

...view details