ಕರ್ನಾಟಕ

karnataka

ETV Bharat / state

ಬಿಜೆಪಿಯದ್ದು 'ಮನ್ ಕೀ ಬಾತ್'ನ ಸರ್ಕಾರ 'ಜನ್ ಕೀ ಬಾತ್' ಅವರು ಕೇಳುವುದಿಲ್ಲ : ರಮಾನಾಥ ರೈ ವ್ಯಂಗ್ಯ - ಶೋಭಾ ಕರಂದ್ಲಾಜೆ ವಿರುದ್ಧ ರಮಾನಾಥ ರೈ ವಾಗ್ದಾಳಿ

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಯಾರೂ ಟೀಕೆ ಮಾಡುವಂತಿಲ್ಲ. ಯಾಕೆಂದರೆ, ಅವರು ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಆದರೆ, ಬಿಜೆಪಿಗರು ಅಧಿಕಾರಕ್ಕೆ ಬಂದು ಇಷ್ಟು ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಉತ್ತರಿಸಲಿ. ಕೊರೊನಾ ಬಂದ ಬಳಿಕ‌ ಜಿಡಿಪಿ ಕುಸಿದಿರೋದಲ್ಲ. ಅದಕ್ಕಿಂತ ಮೊದಲೇ ಕುಸಿದಿದೆ..

ಬಿಜೆಪಿಯದ್ದು 'ಮನ್ ಕೀ ಬಾತ್'ನ ಸರ್ಕಾರ 'ಜನ್ ಕೀ ಬಾತ್' ಅವರು ಕೇಳುವುದಿಲ್ಲ : ರಮಾನಾಥ ರೈ ವ್ಯಂಗ್ಯ
ಬಿಜೆಪಿಯದ್ದು 'ಮನ್ ಕೀ ಬಾತ್'ನ ಸರ್ಕಾರ 'ಜನ್ ಕೀ ಬಾತ್' ಅವರು ಕೇಳುವುದಿಲ್ಲ : ರಮಾನಾಥ ರೈ ವ್ಯಂಗ್ಯ

By

Published : May 7, 2021, 6:40 PM IST

Updated : May 7, 2021, 7:42 PM IST

ಮಂಗಳೂರು: ಕಾಂಗ್ರೆಸ್ ಸರಕಾರ ಯಾವೆಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಾಗ ಬಿಜೆಪಿ ವಿರೋಧ ಮಾಡಿತ್ತೋ, ಅವರೇ ಆಡಳಿತ ನಡೆಸುವಾಗ ಅದನ್ನೆಲ್ಲಾ ಅನುಷ್ಠಾನ ಮಾಡಿದ್ರು ಅಂತ ಮಾಜಿ ಸಚಿವ ರಮಾನಾಥ ರೈ ಹೇಳಿದ್ರು.

ಯುಪಿಸಿಎಲ್ ಬರಬಾರದೆಂದು ಬಹಳ ದೊಡ್ಡ ಹೋರಾಟ ಮಾಡಿದವರು ಬಿಜೆಪಿಯವರೇ, ಆ ಬಳಿಕ ಅದಕ್ಕೆ ಪರವಾನಿಗೆ ನೀಡಿದವರು ಅವರೇ. ಬಹಳ ದೊಡ್ಡ ಪಕ್ಷ ಬಿಜೆಪಿಯವರೇ ನಮಗೆ ಮೋಸ ಮಾಡಿದವರು ಎಂದು ನಮೋ ಪದವನ್ನು ಒತ್ತಿ ಹೇಳಿ ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತಕ್ಕಾಗಿ ಹುಟ್ಟಿಕೊಂಡಿರುವ ಪಕ್ಷ. ಇದು ನೂರಕ್ಕೆ ನೂರು ಸತ್ಯ. ಆಧಾರ್ ಕಾರ್ಡ್, ಜಿಎಸ್​ಟಿ ಮುಂತಾದವುಗಳನ್ನೆಲ್ಲ ಅವರು ಆ ಬಳಿಕ ಅನುಷ್ಠಾನ ಮಾಡಿದರು.

ಬಿಜೆಪಿಯದ್ದು 'ಮನ್ ಕೀ ಬಾತ್'ನ ಸರ್ಕಾರ 'ಜನ್ ಕೀ ಬಾತ್' ಅವರು ಕೇಳುವುದಿಲ್ಲ : ರಮಾನಾಥ ರೈ ವ್ಯಂಗ್ಯ

ಪೆಟ್ರೋಲ್ ಡೀಸೆಲ್ ಬೆಲೆ ತಾರಕಕ್ಕೇರಿದೆ. ಆದ್ದರಿಂದ ಬಿಜೆಪಿ ಜನರ ಪರವಾಗಿರುವ ಪಕ್ಷವಲ್ಲ, ಲೂಟಿಕೋರ, ಮೋಸಗಾರ ಪಕ್ಷ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ, ಶೋಭಾ ಕರಂದ್ಲಾಜೆಯವರು ವಿಪಕ್ಷದವರು ಬಿಟ್ಟು ಹೋಗಿರುವ ಕೆಟ್ಟ ವ್ಯವಸ್ಥೆಯಿಂದ ನಮಗೆ ಕೊರೊನಾ ಸಂದರ್ಭದಲ್ಲಿ ತೊಂದರೆಗಳಾಗುತ್ತಿದೆ ಎಂದು ಹೇಳುತ್ತಾರೆ. ಇದು ಸಿದ್ದರಾಮಯ್ಯ ಸರ್ಕಾರವನ್ನು ಮನಸ್ಸಲ್ಲಿಟ್ಟುಕ್ಕೊಂಡು ಅವರು ಹೇಳುತ್ತಿದ್ದಾರೆ.

ಆದರೆ, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಯಾರೂ ಟೀಕೆ ಮಾಡುವಂತಿಲ್ಲ. ಯಾಕೆಂದರೆ, ಅವರು ಜನರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ನೀಡಿದ್ದಾರೆ.

ಆದರೆ, ಬಿಜೆಪಿಗರು ಅಧಿಕಾರಕ್ಕೆ ಬಂದು ಇಷ್ಟು ವರ್ಷದಲ್ಲಿ ಏನು ಮಾಡಿದ್ದಾರೆ ಎಂದು ಉತ್ತರಿಸಲಿ. ಕೊರೊನಾ ಬಂದ ಬಳಿಕ‌ ಜಿಡಿಪಿ ಕುಸಿದಿರೋದಲ್ಲ. ಅದಕ್ಕಿಂತ ಮೊದಲೇ ಕುಸಿದಿದೆ.

ಬಿಜೆಪಿಯವರದ್ದು 'ಮನ್ ಕೀ ಬಾತ್' ನ ಸರ್ಕಾರ 'ಜನ್ ಕೀ ಬಾತ್' ಅವರು ಕೇಳುವುದಿಲ್ಲ ಎಂದು ಜನರಿಗೂ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು‌. ಬೆಡ್ ಬ್ಲಾಕಿಂಗ್​​ಗೆ ಕೋಮುಬಣ್ಣ ಹಚ್ಚಿರುವ ಘಟನೆ ದುರಾದೃಷ್ಟಕರ.

ರಾಜಕೀಯ ಲಾಭವನ್ನು ಯಾವ ರೀತಿಯಲ್ಲಿ ಪಡೆಯಬಹುದೆಂದು ಬಿಜೆಪಿಯ ಧೋರಣೆಯಿಂದ ತಿಳಿದು ಬರುತ್ತದೆ. ಈ ಕಾಲದಲ್ಲಿಯೂ ಧರ್ಮದ ಹೆಸರನ್ನು ಎತ್ತಿಕಟ್ಟುವುದು ಎಷ್ಟು ಸರಿ ಎಂದು ರಮಾನಾಥ ರೈ ಬೇಸರ ಹೊರಹಾಕಿದ್ರು.

Last Updated : May 7, 2021, 7:42 PM IST

ABOUT THE AUTHOR

...view details