ಕರ್ನಾಟಕ

karnataka

ETV Bharat / state

ಬಂಟ್ವಾಳದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ: ಲಾಕ್​ಡೌನ್ ಒಂದೇ ಸಾಲಲ್ಲ ಎಂದ ರಮಾನಾಥ ರೈ

ಬಂಟ್ವಾಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಮಾಜಿ ಸಚಿವ ಬಿ.ರಮಾನಾಥ ರೈ, ಇದನ್ನು ನಿಯಂತ್ರಿಸಲು ಕೇವಲ ಲಾಕ್​ಡೌನ್ ಒಂದೇ ಪರಿಹಾರವಲ್ಲ. ಸಮುದಾಯ ಪರೀಕ್ಷೆ ಕೂಡ ಅಗತ್ಯ ಎಂದಿದ್ದಾರೆ.

ಮಾಜಿ ಸಚಿವ ಬಿ.ರಮಾನಾಥ ರೈ,

By

Published : Apr 23, 2020, 3:14 PM IST

ಬಂಟ್ವಾಳ(ದ.ಕ.): ಬಂಟ್ವಾಳ ಕ್ಷೇತ್ರವೊಂದರಲ್ಲೇ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮಾಜಿ ಸಚಿವ ಬಿ.ರಮಾನಾಥ ರೈ, ಇದಕ್ಕಿನ್ನು ಲಾಕ್​ಡೌನ್ ಒಂದೇ ಸಾಕಾಗುವುದಿಲ್ಲ. ಸಮುದಾಯ ಪರೀಕ್ಷೆಗೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಮಾನಾಥ ರೈ, ಮಾಜಿ ಸಚಿವ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳದ ಕಸ್ಬಾ ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆ ಮುದಾಯಕ್ಕೆ ಹರಡುವ ಆತಂಕ ಎದುರಾಗಿದ್ದು, ಇದು ಅಪಾಯದ ಸೂಚನೆಯಾಗಿದೆ. ಹೀಗಾಗಿ ರ್ಯಾಪಿಡ್ ಟೆಸ್ಟ್ ಅಗತ್ಯವಾಗಿದೆ ಎಂದರು.

ಲಾಕ್​ಡೌನ್​ನಿಂದ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ಕಂಗಾಲಾಗಿದ್ದು, ಸರ್ಕಾರ ನೀಡಬೇಕಿರುವ ಅಕ್ಕಿ, ಗೋಧಿ ಇನ್ನೂ ತಲುಪಿಲ್ಲ. ಪ್ರಸ್ತುತ ಬಂಟ್ವಾಳದ ನಿಯಂತ್ರಿತ ಪ್ರದೇಶದಲ್ಲಿ ಸಾಕಷ್ಟು ಬ್ಯಾಂಕ್ ಶಾಖೆಗಳಿದ್ದು, ಅವುಗಳ ವ್ಯವಹಾರವನ್ನು ಪಕ್ಕದ ಶಾಖೆಗಳಲ್ಲಿ ಮಾಡುವಂತೆ ಅವಕಾಶ ಕಲ್ಪಿಸಬೇಕು ಎಂದು ರಮಾನಾಥ ರೈ ಸಲಹೆ ನೀಡಿದರು.

ABOUT THE AUTHOR

...view details