ಕರ್ನಾಟಕ

karnataka

ETV Bharat / state

ಸರ್ಕಾರದ ವಿರುದ್ಧ ಸಿಪಿಐಎಂ ಉಳ್ಳಾಲ ಸಮಿತಿ ವತಿಯಿಂದ ಪ್ರತಿಭಟನೆ

ಸಿಪಿಐಎಂ ದ.ಕ ಜಿಲ್ಲಾ ನಿರ್ದೇಶನದ ಮೇರೆಗೆ ಕೋವಿಡ್ ನಿಯಂತ್ರಿಸಲು ಲಾಕ್​​ಡೌನ್ ಪರಿಹಾರವಲ್ಲ ಎಂಬ ಘೋಷಣೆಯಡಿ ಸಿಪಿಐಎಂ ಉಳ್ಳಾಲ ಸಮಿತಿ ವತಿಯಿಂದ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

By

Published : Jul 16, 2020, 11:06 AM IST

Protest
Protest

ಉಳ್ಳಾಲ: 7 ದಿನ ಲಾಕ್‌ಡೌನ್ ಘೋಷಣೆ ಮಾಡಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚು ಹಾಕಲು ಮಾಡಿರುವ ಹುನ್ನಾರ. ಬಡವರಿಗೆ ಕೋವಿಡ್-19 ಹಾಗೂ ಇತರೆ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರಕುವಂತೆ ಮಾಡಬೇಕೆಂದು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಆಗ್ರಹಿಸಿದರು.

ಸಿಪಿಐಎಂ ದ.ಕ ಜಿಲ್ಲಾ ನಿರ್ದೇಶನದ ಮೇರೆಗೆ ಕೋವಿಡ್ ನಿಯಂತ್ರಿಸಲು ಲಾಕ್​​ಡೌನ್ ಪರಿಹಾರವಲ್ಲ ಎಂಬ ಘೋಷಣೆಯಡಿ ಸಿಪಿಐಎಂ ಉಳ್ಳಾಲ ಸಮಿತಿ ವತಿಯಿಂದ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ್ ಮಾತನಾಡಿ, ಲಾಕ್‌ಡೌನ್ ಮಾಡುವ ಮೊದಲು ಜನಸಾಮಾನ್ಯರಿಗೆ ಆಹಾರ ಭದ್ರತೆ, ಆರೋಗ್ಯ ವ್ಯವಸ್ಥೆ ಸಿದ್ಧತೆ ಮೊದಲು ಮಾಡಲಿ. ಸರ್ಕಾರದಿಂದ ಯಾವುದೇ ಸಿದ್ಧತೆ ಇಲ್ಲದೆ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ ಎಂದರು.

For All Latest Updates

ABOUT THE AUTHOR

...view details